ರಾಜ್ಯ ಸಭೆ ಕಲಾಪ ನುಂಗಿದ ಕಾಪ್ಚರ್ ಹಗರಣ: ಕಲಾಪ ಪದೇ ಪದೇ ಮುಂದೂಡಿಕೆ

ರಾಜ್ಯಸಭೆ ಕಲಾಪಕ್ಕೆ ಮತ್ತೆ ಬಹುಕೋಟಿ ವಿವಿಐಪಿ ಕಾಪ್ಟರ್ ಖರೀದಿ ಹಗರಣ ತೊಡಕಾಗಿದ್ದು, ಸೋಮವಾರ ಬೆಳಗ್ಗೆ ಆರಂಭವಾದ ಕಲಾಪ ಮಧ್ಯಾಹ್ನದವರೆಗೂ ಪದೇ ಪದೇ ಮುಂದೂಡಲಾಯಿತು..
ರಾಜ್ಯಸಭೆ (ಸಂಗ್ರಹ ಚಿತ್ರ)
ರಾಜ್ಯಸಭೆ (ಸಂಗ್ರಹ ಚಿತ್ರ)
Updated on: 

ನವದೆಹಲಿ: ರಾಜ್ಯಸಭೆ ಕಲಾಪಕ್ಕೆ ಮತ್ತೆ ಬಹುಕೋಟಿ ವಿವಿಐಪಿ ಕಾಪ್ಟರ್ ಖರೀದಿ ಹಗರಣ ತೊಡಕಾಗಿದ್ದು, ಸೋಮವಾರ ಬೆಳಗ್ಗೆ ಆರಂಭವಾದ ಕಲಾಪ ಮಧ್ಯಾಹ್ನದವರೆಗೂ ಪದೇ ಪದೇ  ಮುಂದೂಡಲಾಯಿತು.

ಕಲಾಪ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯರು, ಗುಜರಾತ್ ಪೆಟ್ರೋಲಿಯಂ ಕಾರ್ಪೊರೇಷನ್ ಸಂಸ್ಥೆಯಲ್ಲಿ ಕೆಟ್ಟ ನಿರ್ವಹಣೆಯಾಗಿದೆ ಎಂದು ಆರೋಪಿಸಿದರು.  ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಕೂಡ ಕಾಂಗ್ರೆಸ್ ಸದಸ್ಯರ ಮೇಲೆ ವಾಗ್ದಾಳಿ ಮಾಡಿ ಕಾಂಗ್ರೆಸ್ ಬೇಕೆಂದೇ ವಿಷಯಾಂತರ ಮಾಡುತ್ತಿದೆ ಎಂದು ಆರೋಪಿಸಿದರು. ಉಭಯ ಪಕ್ಷಗಳ  ಸದಸ್ಯರು ಪರಸ್ಪರ ವಾಕ್ಸಮರದಲ್ಲೇ ಮುಳುಗಿದ್ದರಿಂದ ಕಲಾಪವನ್ನು ಪದೇ ಪದೇ ಮುಂದೂಡಲಾಯಿತು.

ಈ ಬಗ್ಗೆ ಮಾತನಾಡಿರುವ ಬಿಜೆಪಿ ಇದೇ ಬುಧವಾರ ಕಾಪ್ಟರ್ ಹಗರಣ ಸಂಬಂಧ ಸದನದ ಮುಂದೆ ದಾಖಲೆಗಳ ಸಮೇತ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಮಾಹಿತಿ  ನೀಡಲಿದ್ದಾರೆ. ಹೀಗಾಗಿ ಈ ಚರ್ಚೆಯನ್ನು ಬುಧವಾರವೇ ನಡೆಸೋಣ ಎಂದು ಹೇಳಿದೆ. ಇನ್ನು ಕಲಾಪಕ್ಕೆ ಅಡ್ಡಿ ಪಡಿಸಿದ ಸಂಬಂಧ ರಾಜ್ಯಸಭೆ ಉಪ ಸಭಾಧ್ಯಕ್ಷ ಪಿಜೆ ಕುರಿಯನ್ ಅವರು  ಕಾಂಗ್ರೆಸ್ ಸದಸ್ಯರಿಗೆ ನೋಟಿಸ್ ನೀಡಿದ್ದು, ಇದನ್ನು ಸಭಾಧ್ಯಕ್ಷ ಹಮೀದ್ ಅನ್ಸಾರಿ ಅವರ ಗಮನಕ್ಕೆ ತಂದಿದ್ದಾರೆ.

ಇದೇ ವೇಳೆ ಮಾತನಾಡಿದ ತೃಣಮೂಲ ಕಾಂಗ್ರೆಸ್ ಸದಸ್ಯ ಸುಖೆಂಡು ಶೇಖರ್ ರಾಯ್ ಅವರು ಕಾಪ್ಟರ್ ಹಗರಣದಲ್ಲಿ ಫಲಾನುಭವಿಗಳು ಯಾರು ಎಂಬುದನ್ನು ಸಭೆಗೆ ಮಾಹಿತಿ ನೀಡಬೇಕು  ಎಂದು ಆಗ್ರಹಿಸಿದರು. ಈ ಬಗ್ಗೆ ರಕ್ಷಣಾ ಸಚಿವರು ಕೂಡಲೇ ಪ್ರತಿಕ್ರಿಯಿಸಬೇಕು ಎಂದು ಅವರು ಆಗ್ರಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com