ಐಸಿಎಸ್ ಇ ಫಲಿತಾಂಶ ಮೇ 6ರಂದು ಪ್ರಕಟ ಸಾಧ್ಯತೆ

ಭಾರತೀಯ ಪ್ರೌಢ ಶಿಕ್ಷಣ ಪ್ರಮಾಣಪತ್ರ(ಐಸಿಎಸ್ ಇ) 10ನೇ ತರಗತಿ ಮತ್ತು ಭಾರತೀಯ ಶಾಲಾ ಸರ್ಟಿಫಿಕೇಟ್ (ಐಎಸ್ ಸಿ)ಯ 12ನೇ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಭಾರತೀಯ ಪ್ರೌಢ ಶಿಕ್ಷಣ ಪ್ರಮಾಣಪತ್ರ(ಐಸಿಎಸ್ ಇ) 10ನೇ ತರಗತಿ ಮತ್ತು ಭಾರತೀಯ ಶಾಲಾ ಸರ್ಟಿಫಿಕೇಟ್ (ಐಎಸ್ ಸಿ)ಯ 12ನೇ ತರಗತಿಯ ಫಲಿತಾಂಶ ಇದೇ 6ರಂದು ಅಪರಾಹ್ನ 3 ಗಂಟೆಗೆ ಪ್ರಕಟವಾಗುವ ನಿರೀಕ್ಷೆಯಿದೆ.

ಇದೇ ಮೊದಲ ಬಾರಿಗೆ ಲೈವ್ ಇಂಕ್ ಕ್ಯಾರೆಕ್ಟರ್ ರೆಕಗ್ನಿಶನ್ ತಂತ್ರಜ್ಞಾನದ ಸಹಾಯದಿಂದ ಮಂಡಳಿ ನಿಗದಿಗಿಂತ ಎರಡು ವಾರ ಮೊದಲೇ ಫಲಿತಾಂಶ ಪ್ರಕಟಿಸಲಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ವೆಬ್ ಸೈಟ್ ವಿಳಾಸ cisce.org, cisce.org/results ಅಥವಾ careers.cisce.org ಯಲ್ಲಿ ಮೇ 6ರಂದು ಅಪರಾಹ್ನ 3 ಗಂಟೆಗೆ  ವೀಕ್ಷಿಸಬಹುದು. ಎಸ್ ಎಂಎಸ್ ಮೂಲಕವೂ ಫಲಿತಾಂಶ ಲಭ್ಯವಿದೆ. ವಿದ್ಯಾರ್ಥಿಗಳು ICSE 1234567ನ್ನು 09248082883 ಸಂಖ್ಯೆಗೆ ಕಳುಹಿಸಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com