ವಿಜಯ್ ಮಲ್ಯ ರಾಜಿನಾಮೆ ತಿರಸ್ಕರಿಸಿದ ಅನ್ಸಾರಿ

ಮಲ್ಯ ವಿರುದ್ಧ ಶಿಸ್ತುಕ್ರಮದ ಶಿಫಾರಸು ವರದಿಯನ್ನು ರಾಜ್ಯಸಭೆಯ ನೀತಿ ಸಮಿತಿಯು ಬುಧವಾರ ಮಂಡಿಸಲಿದೆ. ಮಲ್ಯ ಅವರನ್ನು...
ವಿಜಯ್ ಮಲ್ಯ
ವಿಜಯ್ ಮಲ್ಯ
Updated on: 
ನವದೆಹಲಿ: ಬ್ಯಾಂಕುಗಳಿಗೆ ಸಾಲ ಪಾವತಿ ಮಾಡದೆ ವಿದೇಶಕ್ಕೆ ತೆರಳಿರುವ ಉದ್ಯಮಿ ವಿಜಯ ಮಲ್ಯ ರಾಜ್ಯಸಭಾ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ನೀಡಿದ್ದು, ಈ ರಾಜಿನಾಮೆ ಪತ್ರವನ್ನು ಸಭಾಪತಿ ಹಮೀದ್‌ ಅನ್ಸಾರಿ ಅವರು ಮಂಗಳವಾರ ತಿರಸ್ಕರಿಸಿದ್ದಾರೆ.
ಅದೇ ವೇಳೆ ಮಲ್ಯ ವಿರುದ್ಧ ಶಿಸ್ತುಕ್ರಮದ ಶಿಫಾರಸು ವರದಿಯನ್ನು ರಾಜ್ಯಸಭೆಯ ನೀತಿ ಸಮಿತಿಯು ಬುಧವಾರ ಮಂಡಿಸಲಿದೆ. ಮಲ್ಯ ಅವರನ್ನು ಸದಸ್ಯತ್ವದಿಂದ ಉಚ್ಚಾಟಿಸುವ ನಿಲುವಿಗೆ ಸಮಿತಿ ಬದ್ಧವಾಗಿರಲಿದೆ ಎನ್ನಲಾಗಿದೆ.
ಕಾಂಗ್ರೆಸ್‌ ಸಂಸದ ಕರಣ್‌ ಸಿಂಗ್‌ ನೇತೃತ್ವದ ಸಮಿತಿಯು ವಿಷಯಕ್ಕೆ ಸಂಬಂಧಿಸಿದ ಸಮಾಲೋಚನೆಯನ್ನು ಮಂಗಳವಾರ ಪೂರ್ಣಗೊಳಿಸಿದೆ. 
‘ವಿಜಯ ಮಲ್ಯ ನೀಡಿರುವ ರಾಜೀನಾಮೆಯನ್ನು ಹಮೀದ್‌ ಅನ್ಸಾರಿ ಸ್ವೀಕರಿಸಿಲ್ಲ. ರಾಜೀನಾಮೆ ಪತ್ರ ನಿಯಮಗಳಿಗೆ ಅನುಗುಣವಾಗಿ ಇಲ್ಲ. ಪತ್ರವು ಮಲ್ಯ ಅವರ ಮೂಲ ಸಹಿಯನ್ನು ಹೊಂದಿಲ್ಲ’ ಎಂದು ರಾಜ್ಯ ಸಭೆಯ ಪ್ರಧಾನ ಕಾರ್ಯದರ್ಶಿ ಹೇಳಿಕೆಯನ್ನು ಉಲ್ಲೇಖಿಸಿ ಅನ್ಸಾರಿ ಅವರ ವಿಶೇಷಾಧಿಕಾರಿ ಟ್ವೀಟ್‌ ಮಾಡಿದ್ದಾರೆ.
ಬುಧವಾರ ನಿರ್ಧಾರ: ರಾಜ್ಯಸಭೆಯ ನೀತಿ ಸಮಿತಿಯ ಶಿಫಾರಸಿನ ಆಧಾರದಲ್ಲಿ ರಾಜ್ಯಸಭೆಯ ಸಭಾಪತಿ ಹಮೀದ್‌ ಅನ್ಸಾರಿ ಅವರು ಇಂದು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಮಲ್ಯ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಜೂನ್‌ 30ಕ್ಕೆ ಕೊನೆಗೊಳ್ಳಲಿದೆ.
ತಮ್ಮನ್ನು ಸದಸ್ಯತ್ವದಿಂದ ಉಚ್ಚಾಟನೆ ಮಾಡಲು ನೀತಿ ಸಮಿತಿಗೆ ಅಧಿಕಾರ ಇಲ್ಲ ಎಂದು ತಮ್ಮ ಪ್ರತಿಕ್ರಿಯೆಯಲ್ಲಿ ಮಲ್ಯ ವಾದಿಸಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com