ಐಆರ್ ಸಿಟಿಸಿ ವೆಬ್ ಸೈಟ್ ಅತಿದೊಡ್ಡ ಟ್ರ್ಯಾವಲ್ ಇ-ಕಾಮರ್ಸ್ ವೆಬ್ ಸೈಟ್ ಆಗಿದ್ದು, ಪ್ರತಿದಿನ ಲಕ್ಷಾಂತರ ವ್ಯವಹಾರ ನಡೆಯುತ್ತದೆ. ಅಷ್ಟೇ ಅಲ್ಲದೇ ಲಕ್ಷಾಂತರ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಮಾಡಿಕೊಳ್ಳಲು ಗ್ರಾಹಕರು ತಮ್ಮ ವೈಯಕ್ತಿಕ ಮಾಹಿತಿ ಅಂದರೆ, ಫೋನ್ ನಂಬರ್, ಇಮೇಲ್ ಐಡಿ, ಆಧಾರ್ ಕಾರ್ಡ್, ಡಿಎಲ್ ನಂಬರ್ ಸೇರಿದಂತೆ ಇತರೆ ಮಾಹಿತಿಗಳನ್ನು ದಾಖಲಿಸಿರುತ್ತಾರೆ.
ಪೊಲೀಸರು ತಮ್ಮ ಬಳಿ ಇರುವ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡ ನಂತರ ನಾವು ಪರಿಶೀಲಿಸಿ ವಿವರವಾದ ಹೇಳಿಕೆ ನೀಡುವುದಾಗಿ ಐಆರ್ ಸಿಟಿಸಿ ಪಿಆರ್ ಒ ತಿಳಿಸಿದ್ದಾರೆ.