ನಮಗೆ ರಾಷ್ಟ್ರೀಯತೆ ಬೋಧಿಸಬೇಡಿ; ವಾರಣಾಸಿಯಲ್ಲಿ ಬಿಜೆಪಿಗೆ ನಿತೀಶ್ ತಾಕೀತು

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದವರಿಗೆ ರಾಷ್ಟ್ರೀಯತೆಯ ಬಗ್ಗೆ ಬೋಧಿಸುವ ಹಕ್ಕಿರುವುದಿಲ್ಲ ಎಂದು ಬಿಜೆಪಿ ಮತ್ತು ಆರ್ ಎಸ್ ಎಸ್ ಮೇಲೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
Updated on: 

ವಾರಣಾಸಿ: ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದವರಿಗೆ ರಾಷ್ಟ್ರೀಯತೆಯ ಬಗ್ಗೆ ಬೋಧಿಸುವ ಹಕ್ಕಿರುವುದಿಲ್ಲ ಎಂದು ಬಿಜೆಪಿ ಮತ್ತು ಆರ್ ಎಸ್ ಎಸ್ ಮೇಲೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ ಹರಿಹಾಯ್ದಿದ್ದಾರೆ.

"ಇಂದು ಬಿಜೆಪಿ ರಾಷ್ಟ್ರೀಯತೆ ಬಗ್ಗೆ ಮಾತನಾಡುತ್ತಿದೆ ಆದರೆ ಬಿಜೆಪಿ ಮತ್ತು ಆರ್ ಎಸ್ ಎಸ್ ನ ಹಿಂದಿನ ತಲೆಮಾರಿನ ನಾಯಕರ್ಯಾರೂ ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಲಿಲ್ಲ" ಎಂದು ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಹೇಳಿದ್ದಾರೆ.

"ಬಾಪು (ಮಹಾತ್ಮ ಗಾಂಧಿ) ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದಾಗ, ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅಂತಹ ಸ್ವಾತಂತ್ರ್ಯ ಹೋರಾಟಗಾರು ಪ್ರಾಣ ಬಿಟ್ಟಾಗ, ಅವರು (ಬಿಜೆಪಿ ಮತ್ತು ಆರ್ ಎಸ್ ಎಸ್) ಇರಲಿಲ್ಲ.

"ಆದರೆ ಇಂದು ಅವರು ರಾಷ್ಟ್ರೀಯತೆ ಬಗ್ಗೆ ಬೋಧಿಸುತ್ತಿದ್ದಾರೆ" ಎಂದಿರುವ ಜೆಡುಯು ಮುಖಂಡ "ಅವರಿಂದ ರಾಷ್ಟ್ರೀಯತೆ ಪಾಠ ಕಲಿಯುವ ಅವಶ್ಯಕತೆ ಇಲ್ಲ" ಎಂದಿದ್ದರೆ.

೨೦೧೪ ರ ಲೋಕಸಭಾ ಚುನಾವಣೆಯ ನಂತರ ಮೊದಲ ಬಾರಿಗೆ ವಾರಣಾಸಿಗೆ ಬಂದಿರುವ ಜೆಡಿಯು ಮುಖಂಡ ಬಿಜೆಪಿ ಮುಂದಾಳತ್ವದ ಕೇಂದ್ರ ಸರ್ಕಾರ ಎಲ್ಲ ನಿಟ್ಟಿನಲ್ಲೂ ಸೋತಿದೆ ಎಂದಿದ್ದಾರೆ.

"೧೦೦ ದಿನಗಳೊಳಗೆ ಕಪ್ಪು ಹಣ ವಾಪಸ್ ತರುವುದಾಗಿ ಹೇಳಿದ್ದರು. ಅದಕ್ಕೆ ಬದ್ಧರಾಗಿದ್ದಾರೆಯೇ?

"ಲವ್ ಜಿಹಾದ್, ಘರ್ ವಾಪಸಿ ಮಾಡುತ್ತಾ ಬಿಹಾರ ಚುನಾವಣಾ ವೇಳೆಯಲ್ಲಿ ಗೋಮಾಂಸ ವಿಷಯ ಎತ್ತಿದರು" ಎಂದು ನಿತೀಶ್ ವಾಗ್ದಾಳಿ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com