ಅಪ್ರಾಪ್ತೆ ಮೇಲೆ ಅತ್ಯಾಚಾರ: ಗೋವಾ ಶಾಸಕ ಅಟಾನ್ಸಿಯೋ ಮಾನ್ಸೆರಾಟ್ ಗೆ ಜಾಮೀನು

16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈಲು ಪಾಲಾಗಿದ್ದ ಗೋವಾ ಉಚ್ಚಾಟಿತ ಕಾಂಗ್ರೆಸ್ ಶಾಸಕ ಅಟಾನ್ಸಿಯೋ ಮಾನ್ಸೆರಾಟ್ ...
ಅಟಾನ್ಸಿಯೋ ಮಾನ್ಸೆರಾಟ್
ಅಟಾನ್ಸಿಯೋ ಮಾನ್ಸೆರಾಟ್
ಪಣಜಿ: 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈಲು ಪಾಲಾಗಿದ್ದ ಗೋವಾ ಉಚ್ಚಾಟಿತ ಕಾಂಗ್ರೆಸ್ ಶಾಸಕ ಅಟಾನ್ಸಿಯೋ ಮಾನ್ಸೆರಾಟ್ ಅಲಿಯಾಸ್ ಬಾಬುಷ್ ಮಾನ್ಸೆರಾಟ್ ಗೆ ಗೋವಾ ಕೋರ್ಟ್ ಬುಧವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಗೋವಾ ಶಾಸಕ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಮಕ್ಕಳ ನ್ಯಾಯಾಲಯದ ಅಧ್ಯಕ್ಷ ಪ್ರಮೋದ್ ಕಾಮತ್ ಅವರು, ಮಾನ್ಸೆರಾಟ್ ಹಾಗೂ ಇತರೆ ಆರೋಪಿಗಳಾದ ಸಂತ್ರಸ್ಥೆಯ ತಾಯಿ ಮತ್ತು ಪಿಂಪ್ ಗೆ ಷರತ್ತುಬದ್ಧ ಜಾಮೀನು ನೀಡಿದೆ.
1 ಲಕ್ಷ ರುಪಾಯಿ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಿರುವ ಕೋರ್ಟ್, ಪಾಸ್ ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹಾಗೂ ನಿತ್ಯ ಕ್ರೈಂ ಬ್ರ್ಯಾಂಚ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗವಂತೆ ಶಾಸಕನಿಗೆ ಸೂಚಿಸಿದೆ.
ಮಾಜಿ ಶಿಕ್ಷಣ ಸಚಿವ ಮಾನ್ಸೆರೆಟ್ ವಿರುದ್ಧ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಹಾಗೂ ಮಾನವ ಕಳ್ಳ ಸಾಗಣೆಯ ಆರೋಪದ ಮೇಲೆ ಕಳೆದ ವಾರ ಗೋವಾ ಪೊಲೀಸರು ಬಂಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com