ಜಾಮೀನು

ಭವಿಷ್ಯದ ಚುನಾವಣೆಗಳು ಧರ್ಮ-ಜಾತಿ ಆಧಾರದ ಮೇಲೆ ನಡೆಯುವುದಿಲ್ಲ: ಬೇಲ್ ಮೇಲೆ ಹೊರಬಂದ ನಂತರ ಅಜಂ ಖಾನ್ ಹೇಳಿಕೆ
ನಮ್ಮ ಪಕ್ಷವು ಯುವಕರು, ರೈತರು, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗಾಗಿ ಒಂದು ಕಾರ್ಯಕ್ರಮವನ್ನು (ಯೋಜನೆಯನ್ನು) ಮುಂದಿಡುತ್ತಿದೆ. ಇದು ಉತ್ತಮ ವಾತಾವರಣ, ಸಹೋದರತ್ವ, ಪ್ರೀತಿ ಮತ್ತು ಸಾಮರಸ್ಯಕ್ಕಾಗಿ ರೂಪಿಸಲಾದ ಕಾರ್ಯಕ್ರಮವಾಗಿದೆ.

ಇಬ್ಬರು ಅಪರಾಧಿಗಳಿಗೆ ಜಾಮೀನು ಮಂಜೂರು; ಕುಟುಂಬ ಸಮೇತ ಗುಜರಾತ್ ತೊರೆದ ಬಿಲ್ಕಿಸ್ ಬಾನು: ಸಂಬಂಧಿ ಮಾಹಿತಿ
ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ದೋಷಿಗಳಾದ ಬಿಪಿನ್ ಚಂದ್ರ ಕನ್ನಯ್ಯಲಾಲ್ ಜೋಶಿ ಮತ್ತು ಪ್ರದೀಪ್ ರಮಣಲಾಲ್ ಮೋಧಿಯಾ ಅವರ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: ತಂದೆಯ ಪಿತೃಕಾರ್ಯದಲ್ಲಿ ಭಾಗವಹಿಸಲು ಸಾಕ್ಷಿದಾರ ಪ್ರದೋಶ್ ಗೆ ಜಾಮೀನು!
ತಮ್ಮ ತಂದೆ ಸುಬ್ಬರಾವ್ ಅವರ ಮೊದಲ ಪುಣ್ಯತಿಥಿಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು 20 ದಿನಗಳ ಕಾಲ ಜಾಮೀನು ಕೋರಿ ಪ್ರದೂಷ್ ಎಸ್. ರಾವ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರು ಈ ಆದೇಶ ಹೊರಡಿಸಿದ್ದಾರೆ.

'ಕೊಡದಿದ್ದರೆ ಮತ್ತೆ ಜೈಲಿಗೆ ಕಳುಹಿಸುತ್ತೇನೆ': ಬೆದರಿಕೆ ಹಾಕಿ 3 ಸಾವಿರ ರೂ ಲಂಚ ಪಡೆಯುತ್ತಿದ್ದ ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ..!
ಪ್ರತಿ ಭಾನುವಾರ ಠಾಣೆಗೆ ತೆರಳಿ ಹಾಜರಾತಿ ನೀಡಬೇಕಿದ್ದ ಜಾಮೀನು ಷರತ್ತನ್ನು ಸಡಿಲಿಸುವುದಕ್ಕಾಗಿ ಕಾನ್‌ಸ್ಟೆಬಲ್ ರೂ.3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಭಟ್ಕಳ: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಆರೋಪ; ಇಬ್ಬರಿಗೆ ಜಾಮೀನು
ಕಲ್ಲು ತೂರಾಟ ನಡೆಸಿರುವುದಕ್ಕೆ ಇಬ್ಬರ ವಿರುದ್ಧವೂ ಯಾವುದೇ ಸಾಕ್ಷ್ಯವಿಲ್ಲ. ಪ್ರತಿಭಟಿಸುತ್ತಿದ್ದ ಜನರನ್ನು ಸಮಾಧಾನಪಡಿಸುವ ಉದ್ದೇಶದಿಂದ ಪೊಲೀಸರು ಅವರನ್ನು ಬಂಧಿಸಿದ್ದಾರೆಂದು ಹೇಳಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.

'ಜಾಮೀನು ಸಿಕ್ಕ ಮಾತ್ರಕ್ಕೆ ಪ್ರಕರಣ ಇತ್ಯರ್ಥ ಎಂದರ್ಥವಲ್ಲ': ಪ್ರಿಯಾಂಕ್ ಖರ್ಗೆ ಕುರಿತು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ
ಕಾನೂನು ಎಲ್ಲರನ್ನೂ ಸಮಾನವಾಗಿ ಪರಿಗಣಿಸುತ್ತದೆ. ಸಚಿವರ ಹೇಳಿಕೆಗಳಿಗೆ ಅವರನ್ನು ಹೊಣೆಗಾರರನ್ನಾಗಿಸಲು ಪಕ್ಷವು ನ್ಯಾಯಾಲಯದ ಮೊರೆ ಹೋಗಿದೆ ಎಂದು ತಿಳಿಸಿದರು.

ವಿಚಾರವಾದಿ ದಾಭೋಲ್ಕರ್ ಹತ್ಯೆ ಪ್ರಕರಣ: ಸಚಿನ್ ಅಂದುರೆಗೆ ಜಾಮೀನು; ಜೀವಾವಧಿ ಶಿಕ್ಷೆ ಅಮಾನತು
ವಿಚಾರವಾದಿ ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದಲ್ಲೂ ಸಚಿನ್ ಅಂದುರೆಗೆ ಈಗಾಗಲೇ ಜಾಮೀನು ದೊರೆತಿತ್ತು. ಆದರೆ, ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಜಾಮೀನು ಸಿಗದ ಹಿನ್ನೆಲೆಯಲ್ಲಿ ಅವರು ಜೈಲಿನಲ್ಲೇ ಮುಂದುವರಿದಿದ್ದರು.

ಮೇಘಾಲಯ ಹನಿಮೂನ್ ಕೊಲೆ ಪ್ರಕರಣ: ಸೋನಂ ರಘುವಂಶಿ ಜಾಮೀನು ರದ್ಧತಿಗೆ ಸುಪ್ರೀಂ ಕೋರ್ಟ್ ನಿರಾಕರಣೆ
ಮೇಘಾಲಯ ಸರ್ಕಾರ ಸಲ್ಲಿಸಿದ್ದ ಈ ಅರ್ಜಿ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಿದ್ದು, ಸೋನಮ್ ವಿರುದ್ಧದ ಆರೋಪವು ಗಂಭೀರವಾಗಿದೆ.

ED case: ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್‌ಗೆ ಹೈಕೋರ್ಟ್ ಜಾಮೀನು
ಈ ಹಿಂದೆ ದಿನೇಶ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ನಂತರ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

