ಪುದುಚೇರಿ: ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಪುದುಚೇರಿ ವಿಧಾನಸಭೆಗೆ ಆಯ್ಕೆಯಾಗಿರುವ ನೂತನ ಶಾಸಕರ ಪೈಕಿ 11 ಮಂದಿಯ ವಿರುದ್ಧ ಕ್ರಿಮಿನಲ್ ಕೇಸ್ ಗಳಿವೆ ಎಂದು ಪ್ರಜಾಪ್ರಭುತ್ವ ಸುಧಾರಣಾ ಸಂಘ(ಎಡಿಆರ್) ಸಮೀಕ್ಷೆ ಹೇಳಿದೆ.
ಪುದುಚೇರಿಯ ಒಟ್ಟು 30 ಶಾಸಕರ ಪೈಕಿ ನಾಲ್ವರ ವಿರದ್ಧ ಕೊಲೆ. ಕೊಲೆ ಯತ್ನ, ಕಳ್ಳತನ ಹಾಗೂ ಭ್ರಷ್ಟಾಚಾರ ಪ್ರಕರಣಗಳಿವೆ ಎಂದು ಎಡಿಆರ್ ಹೇಳಿದೆ.
ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ 11 ಶಾಸಕರ ಪೈಕಿ ಕಾಂಗ್ರೆಸ್ ನ ಐದು, ಎಐಎನ್ಆರ್ ಸಿಯ ಮೂವರು, ಡಿಎಂಕೆ ಇಬ್ಬರು ಹಾಗೂ ಎಐಎಡಿಎಂಕೆಯ ಒಬ್ಬ ಶಾಸಕರಿದ್ದಾರೆ.
ಇನ್ನು 30 ಶಾಸಕರ ಪೈಕಿ 25 ಶಾಸಕರು ಕೋಟ್ಯಾಧಿಪತಿಗಳಾಗಿದ್ದು, ಐಎಎನ್ಆರ್ ಸಿಯ ಅಶೋಕ್ ಆನಂದ್(124 ಕೋಟಿ) ಅತ್ಯಂತ ಶ್ರೀಮಂತ ಶಾಸಕರಾಗಿದ್ದರೆ.