ದೇಶ

ಬೈಕ್ ಕೊಡಿಸಲಿಲ್ಲ ಎಂದು ಫ್ಲೈಓವರ್ ನಿಂದ ಜಿಗಿದ ಅಪ್ರಾಪ್ತೆ

ಬೈಕ್ ಕೊಡಿಸಲಿಲ್ಲ ಎಂದು ಫ್ಲೈಓವರ್ ನಿಂದ ಜಿಗಿದ ಅಪ್ರಾಪ್ತೆ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಪೋಷಕರು ಬೈಕ್ ಕೊಡಿಸಲು ನಿರಾಕರಿಸಿದ್ದಕ್ಕೆ ನೊಂದ ಅಪ್ರಾಪ್ತೆ ಬಾಲಕಿಯೊಬ್ಬಲು ಫ್ಲೈಓವರ್ ನಿಂದ ಜಿಗಿದಿರುವ ಘಟನೆಯೊಂದು ಉತ್ತರ ದೆಹಲಿಯ ಜಹಾಂಗೀರ್ಪುರಿ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.

ಜಹಾಂಗೀರ್ಪುರಿಯ ನಿವಾಸಿಯಾಗಿರುವ ಬಾಲಕಿ ನಿನ್ನೆ ಬೈಕ್ ಕೊಡಿಸುವಂತೆ ಪೋಷಕರನ್ನು ಕೇಳಿದ್ದಾಳೆ. ಈ ವೇಳೆ ಪೋಷಕರೊಡನೆ ಜಗಳವಾಡಿದ್ದಾಳೆ. ಇದರಂತೆ ನಿನ್ನೆ ಮಧ್ಯಾಹ್ನ 1.45ರ ಸುಮಾರಿಗೆ ಫ್ಲೈಓವರ್ ಬಳಿ ಬಂದಿರುವ ಬಾಲಕಿ ಇದ್ದಕ್ಕಿದ್ದಂತೆ ಫ್ಲೈ ಓವರ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ.

ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದು, ಕೈಗಳ ಮೂಳೆ ಮುರಿದಿರುವುದಾಗಿ ತಿಳಿದುಬಂದಿದೆ.

ಬಾಲಕಿ ಇತ್ತೀಚೆಗೆಷ್ಟೇ ದ್ವಿತೀಯ ಪಿಯುಸಿ ಉತ್ತೀರ್ಣಳಾದ ಕಾರಣ ಪೋಷಕರ ಬಳಿ ಕೇಳಿದ್ದಳು. ಆದರೆ, ಬೈಕ್ ಕೊಡಿಸಲು ಹಣವಿಲ್ಲದ ಪೋಷಕರು ನಿರಾಕರಿಸಿದ್ದಾರೆ. ಇದರಿಂದ ಬೇಸತ್ತು ಬಾಲಕಿ ಈ ಯತ್ನ ಮಾಡಿದ್ದಾಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.