ಸುಲಭ್ ಶೌಚಾಲಯಕ್ಕೆ ನನ್ನ ಹೆಸರಿಟ್ಟಿರುವ ಬಗ್ಗೆ ಹೆಮ್ಮೆಯಿದೆ: ರಿಷಿ ಕಪೂರ್

Published On :
ಅಲಹಾಬಾದ್: ಅಲಹಾಬಾದ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸುಲಭ್ ಶೌಚಾಲಯಕ್ಕೆ ಬಾಲಿವುಡ್ ನಟ ರಿಷಿ ಕಪೂರ್ ಅವರ ಹೆಸರಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ರಿಷಿ, ಈ ಸುದ್ದಿಯನ್ನು ಓದಲು ತಾನು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
ರಾಷ್ಟ್ರದ ಪ್ರಮುಖ ಆಸ್ತಿಗಳಿಗೆಲ್ಲಾ ಗಾಂಧಿ ಕುಟುಂಬದ ಹೆಸರಿಡಲು, ಅದೇನು ಅವರಪ್ಪನ ಆಸ್ತಿಯೇ ಎಂದು ಕೇಳಿ ಟ್ವೀಟ್ ಮಾಡಿ ರಿಷಿ ಸುದ್ದಿಗೆ ಗ್ರಾಸವಾಗಿದ್ದರು.
ಗಾಂಧಿ ಕುಟುಂಬದ ವಿರುದ್ಧ ರಿಷಿ ಕಪೂರ್ ಸರಣಿ ಟ್ವೀಟ್ ಮಾಡಿದ್ದಕ್ಕೆ ಕೋಪಗೊಂಡ ಕಾಂಗ್ರೆಸ್ ಕಾರ್ಯಕರ್ತರು ಅಲಹಾಬಾದ್ನಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ರಿಷಿ ಕಪೂರ್ ಎಂದು ನಾಮಕರಣ ಮಾಡಿ ಪ್ರತಿಭಟಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ರಿಷಿ, ನಾನು ಈ ಬಗ್ಗೆ ಉತ್ಸುಕನಾಗಿದ್ದೇನೆ. ನನ್ನ ಹೆಸರನ್ನು ಹಾಗಾದರೂ ಬಳಸಿದರಲ್ಲ. ಈ ಕಾಂಗ್ರೆಸ್ ಕಾರ್ಯಕರ್ತರು ಯಾವುದಕ್ಕೂ ಯೋಗ್ಯರಲ್ಲ. ಸುಲಭ್ ಶೌಚಾಲಯಕ್ಕೆ ನನ್ನ ಹೆಸರಿಟ್ಟಿರುವ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ಯಾಕೆಂದರೆ ಇದು ಈಗ ಪ್ರಧಾನಿಯವರ ಆಪ್ತ ಯೋಜನೆಯಾಗಿದೆ.
ಆದಾಗ್ಯೂ, ನಾನು ನೆಹರು, ಗಾಂಧಿ ಕುಟುಂಬದ ವಿರೋಧಿಯಲ್ಲ, ಆದರೆ ಆ ಕುಟುಂಬದ ಹೆಸರನ್ನು ವ್ಯಾಪಕವಾಗಿ ಬಳಸುವುದರ ಬಗ್ಗೆ ನನ್ನ ವಿರೋಧವಿದೆ ಎಂದು ರಿಷಿ ಕಪೂರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


