

ನವದೆಹಲಿ: ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ ಮೇಲೆ ಶುಕ್ರವಾರ ಮುಂಜಾನೆ ಹಲ್ಲೆ ನಡೆದಿದೆ. ಸದ್ಯ ನಾಶಿಕ್ನ ಅಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಮ್ಮ ಮೇಲೆ ಉದ್ದೇಶಿತಪೂರ್ವವಾಗಿ ಹಲ್ಲೆ ನಡೆಸಿದ್ದು ತನಗೆ ಜೀವ ಬೆದರಿಕೆಯಿರುವುದಾಗಿ ತೃಪ್ತಿ ಹೇಳಿದ್ದಾರೆ.ನಿನ್ನೆಯಷ್ಟೆ ನಾಸಿಕ್ನಲ್ಲಿ ಕಪಾಲೇಶ್ವರ ದೇವಾಲಯದ ಗರ್ಭಗುಡಿಗೆ ಪ್ರವೇಶಿಸಿದ್ದರು.
ನಿನ್ನೆ ತೃಪ್ತಿ ದೇಸಾಯಿ ಹಾಗೂ ಕೆಲವು ಮಹಿಳೆಯರು ನಾಸಿಕ್ನ ಪ್ರಸಿದ್ಧ ಕಪಾಲೇಶ್ವರ ದೇವಾಲಯದ ಗರ್ಭಗುಡಿಗೆ ಪ್ರವೇಶ ಮಾಡುವ ಮೂಲಕ ಹಲವು ವರ್ಷಗಳ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿದ್ದರು.
ಸ್ಥಳೀಯರು ಸೇರಿದಂತೆ ಪೂಜಾರಿಗಳು ಮತ್ತು ದೇವಾಲಯದ ಆಡಳಿತ ಮಂಡಳಿ ಪ್ರವೇಶಕ್ಕೆ ಅಡ್ಡಿಪಡಿಸಿದರೂ ಎಲ್ಲಾ ಅಡೆ ತಡೆಗಳನ್ನು ಮೀರಿ ದೇವಾಲಯದ ಕೇಂದ್ರ ಭಾಗಕ್ಕೆ ಭೇಟಿ ನೀಡಿ ಪಾರ್ಥನೆ ಸಲ್ಲಿಸಿದ್ದರು.