

ಒನ್ ರ್ಯಾಂಕ್ ಒನ್ ಪೆನ್ಶನ್ ಜಾರಿಗೆ ಆಗ್ರಹಿಸಿ ಆತ್ಮಹತ್ಯೆಗೆ ಶರಣಾಗಿದ್ದ ಮಾಜಿ ಯೋಧ ರಾಮ್ ಕಿಶನ್ ಗರೆವಾಲ್ ಅವರ ಪ್ರಕರಣವನ್ನೇ ಮುಂದಿಟ್ಟುಕೊಂಡು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ನಗೆಗೀಡಾಗಿದ್ದಾರೆ.
ಕೇಂದ್ರ ಸರ್ಕಾರದ ವಿಳಂಬ ನೀತಿಯಿಂದ ಬೇಸತ್ತು ಯೋಧ ಮೃತಪಟ್ಟಿದ್ದು, ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳುವ ಸಲುವಾಗಿ ಈ ಇಬ್ಬರು ನಾಯಕರು ಇನ್ನಿಲ್ಲದಂತೆ ಕಸರತ್ತು ನಡೆಸಿದ್ದರು. ಒಂದೆಡೆ ಯೋಧನ ಆತ್ಮಹತ್ಯೆಗೆ ವಿಷಾದ ವ್ಯಕ್ತಪಡಿಸಿದ್ದ ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್ ಮಾಜಿ ಯೋಧನ ಮೃತದೇಹವಿದ್ದ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ನಗು ನಗುತ್ತಾ ಇರುವುದು ನೋಡಿದರೆ ಇದು ವಿಷಾದವೋ, ವಿನೋದವೋ ಎಂದು ಅನುಮಾನ ಹುಟ್ಟಿಸುತ್ತದೆ.
ಈ ಇಬ್ಬರು ನಾಯಕರ ವರ್ತನೆ ವಿರುದ್ಧ ಇದೀಗ ಟ್ವೀಟರಿಗರಿಂದ ಟೀಕೆಗಳು ಶುರುವಾಗಿದೆ.
RaGa- Inka Beta mara hai
Police- Pitaji mare hain
RaGa- Ye unke baap hain
ROFL