ಹಿರಿಯ ಕಾಂಗ್ರೆಸ್‌ ಮುಖಂಡ ಅಜಯ್‌ ಸಿಂಗ್‌ ಸಂಬಂಧಿ ನಕ್ಸಲ್‌ ಗುಂಡಿಗೆ ಬಲಿ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಹಿರಿಯ ಕಾಂಗ್ರೆಸ್‌ ಮುಖಂಡ ಅಜಯ್‌ ಸಿಂಗ್‌ ಅವರ ಸೋದರ ಸಂಬಂಧಿ ಮೇಲೆ ಚಾಕು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಛತ್ತೀಸ್‌ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಕ್ಸಲರು ಹಿರಿಯ ಕಾಂಗ್ರೆಸ್‌ ಮುಖಂಡ ಅಜಯ್‌ ಸಿಂಗ್‌ ಅವರ ಸೋದರ ಸಂಬಂಧಿ ಮೇಲೆ ಚಾಕು ಮತ್ತು ಕೊಡಲಿಯಿಂದ ದಾಳಿ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಭೈರಾಮಗಢ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿದ್ದ ಅಜಯ್ ಸಿಂಗ್ ಅವರ ಸಂಬಂಧಿ ರಾಹುಲ್ ರಾಯಿಡು ಅವರನ್ನು ನಕ್ಸಲರು ಇಂದು ಬೆಳಗ್ಗೆ ಹತ್ಯೆ ಮಾಡಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ರಾಯಿಡು ಅವರು ಭರಾಮಗಢ್ ಹೊರವಲಯದ ಸಂಜಯ್ ಪರ ಪ್ರದೇಶದಲ್ಲಿ ಗ್ರಾಮದ ಜನರೊಂದಿಗೆ ಕಾರ್ಡ್ ಆಡುತ್ತಿದ್ದ ವೇಳೆ ನಕ್ಸಲರ ಗುಂಪು ದಾಳಿ ನಡೆಸಿದೆ.
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಯಿಡು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನೆಯ ನಂತರ ಪೊಲೀಸರು ನಕ್ಸಲರಿಗಾಗಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com