ಮನೋಹರ್ ಪರಿಕ್ಕರ್ ಕೇಂದ್ರ ಸಂಪುಟದ ನವರತ್ನಗಳಲ್ಲಿ ಒಬ್ಬರು: ನರೇಂದ್ರ ಮೋದಿ

ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟದ ನವರತ್ನ(9 ರತ್ನ)ಗಳಲ್ಲಿ ಒಬ್ಬರು ಎಂದು ಬಣ್ಣಿಸಿದ್ದಾರೆ.
ಮನೋಹರ್ ಪರಿಕ್ಕರ್-ನರೇಂದ್ರ ಮೋದಿ
ಮನೋಹರ್ ಪರಿಕ್ಕರ್-ನರೇಂದ್ರ ಮೋದಿ
Updated on: 
ಪಣಜಿ: ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟದ ನವರತ್ನ(9 ರತ್ನ)ಗಳಲ್ಲಿ ಒಬ್ಬರು ಎಂದು ಬಣ್ಣಿಸಿದ್ದಾರೆ.
ಗೋವಾದಲ್ಲಿ ಎರಡು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಿ ಮಾತನಡಿದ ವೇಳೆ ಪ್ರಧಾನಿ ಮೋದಿ, ದೀರ್ಘಾವಧಿಯಿಂದ ಜಟಿಗೊಂಡಿರುವ ಸಮಸ್ಯೆಗಳನ್ನು ಬಗೆಹರಿಸಲು ಅವಿರತ ಶ್ರಮಿಸುತ್ತಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಕ್ಬರ್ ನ ಆಸ್ಥಾನದಲ್ಲಿ 9 ರತ್ನಗಳಿದ್ದವು, ಅವರ ಸಾಮರ್ಥ್ಯದಿಂದಲೇ ಅಕ್ಬರ್ ನ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಹಾಗೆಯೇ ನನ್ನ ಸಂಪುಟದಲ್ಲೂ ಹಲವು ರತ್ನಗಳಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ. 
ನನ್ನ ಸಂಪುಟದಲ್ಲಿರುವ ನವರತ್ನಗಳಲ್ಲಿ ಅತ್ಯಂತ ಉಜ್ವಲವಾದದ್ದು ಗೋವಾದಿಂದ ಸಿಕ್ಕಿದೆ, ಅದು ಮನೋಹರ್ ಪರಿಕ್ಕರ್ ಎಂದು ಪ್ರಧಾನಿ ಮೋದಿ, ರಕ್ಷಣಾ ಸಚಿವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳ ಬಳಿಕ ಕಡಿಮೆ ಸಮಯದಲ್ಲಿ 40 ವರ್ಷಗಳ ಸಮಸ್ಯೆಗಳನ್ನು ಬಗೆಹರಿಸುವ ಸಮರ್ಥ ರಕ್ಷಣಾ ಸಚಿವರು ದೇಶಕ್ಕೆ ಸಿಕ್ಕಿದ್ದಾರೆ. ರಕ್ಷಣಾ ಸಚಿವರು ಅವಿರತ ಶ್ರಮಿಸುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ. 
ಈಗ ನಾವು ಭಾರತದ ಭವಿಷ್ಯದ ದೃಷ್ಟಿಯಿಂದ ಶೀಘ್ರಗತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ, ಕಳೆದ 2 ವರೆ ವರ್ಷದಿಂದ ರಕ್ಷಣಾ ಸಚಿವಾಲಯದ ಕಾರ್ಯವೈಖರಿ ಬಗ್ಗೆ ಒಂದೇ ಒಂದು ಅಪಸ್ವರವೂ ಕೇಳಿಬಂದಿಲ್ಲ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com