

ರಾಯಪುರ: ನಕ್ಸಲರ ಮುಖಂಡ ಹಾಗೂ ಜಿಲ್ಲಾ ಶಸಸ್ತ್ರ ಮೀಸಲು ಪಡೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲರ ಮುಖಂಡ ಸಾವನ್ನಪ್ಪಿದ್ದಾನೆ.
ಛತ್ತೀಸ್ ಗಡದ ಸುಕ್ಮಾ ಜಿಲ್ಲೆಯಲ್ಲಿ ಶಸ್ತ್ರ ಸಜ್ಜಿತ ನಕ್ಸಲರು ಸೆಕ್ಯೂರಿಟಿ ಪಡೆ ಇಂದು ಬೆಳಗ್ಗೆ ನಡೆದ ಗುಂಡಿನ ಕಾಳಗದಲ್ಲಿ ವಂಜಾಮ್ ನಂದಾ ಎಂಬಾತ ಸಾವನ್ನಪ್ಪಿದ್ದಾನೆ.
ನಂದಾ ಎಂಬಾತ ಸಾವನ್ನಪ್ಪಿದ ನಂತರ ಆತನ ಜೊತೆಯಿದ್ದ ಉಳಿದ ನಕ್ಸಲರು ಸ್ಥಳದಿಂದ ಪರಾರಿಯಾಗಿದ್ದಾರೆ. ಮೃತ ನಕ್ಸಲ್ ಕಮಾಂಡೋ ವಿರುದ್ಧ ವಿವಿಧ ಕೋರ್ಟ್ ಗಳಿಂದ 12 ವಾರಂಟ್ ಜಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.