ನೋಟು ನಿಷೇಧ ಎಫೆಕ್ಟ್: 6 ಸಾವಿರ ಕೋಟಿಯೊಂದಿಗೆ ಸರ್ಕಾರಕ್ಕೆ ಉದ್ಯಮಿ ಶರಣು?

ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1ಸಾವಿರ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ಮೇಲೆ ದೇಶದಲ್ಲೇ ಅತ್ಯಂತ ಶ್ರೀಮಂತ ಆಭರಣಗಳ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಸೂರತ್: ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1ಸಾವಿರ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ಮೇಲೆ ದೇಶದಲ್ಲೇ ಅತ್ಯಂತ ಶ್ರೀಮಂತ ಆಭರಣಗಳ ಉದ್ಯಮಿ ಎನ್ನಲಾದ ಸೂರತ್ ಮೂಲದ ಉದ್ಯಮಿಯೊಬ್ಬ 6 ಸಾವಿರ ಕೋಟಿ ರುಪಾಯಿ ಹಣದೊಂದಿಗೆ ಸರ್ಕಾರಕ್ಕೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.

ಸೂರತ್ ನ ಲಾಲಿಜಿಭಾಯ್ ಪಟೇಲ್ ಇಷ್ಟೊಂದು ಭಾರೀ ಹಣದೊಂದಿಗೆ ಸರ್ಕಾರಕ್ಕೆ ಶರಣಾಗಿದ್ದಾರೆ. ಆದರೆ ಶರಣಾಗತಿಗೆ ನಿಜವಾದ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.

ಸೂರತ್`ನ ಖ್ಯಾತ ಡೈಮಂಡ್ ವ್ಯಾಪಾರಿ ಮತ್ತು ರಿಯಲ್ ಎಸ್ಟೇಟ್ ಕಿಂಗ್ ಎಂದೇ ಕರೆಯಲಾಗುವ ಈ ಉದ್ಯಮಿ ದೀಪಾವಳಿ ಹಬ್ಬಕ್ಕೆ ನೌಕರರಿಗೆ ಕಾರು ಹಾಗೂ ಫ್ಲ್ಯಾಟ್ ಗಳನ್ನು ನೀಡಿ ಸುದ್ದಿ ಮಾಡಿದ್ದರು. ಜೊತೆಗೆ ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ 200 ಕೋಟಿ ರೂ ಹಣವನ್ನು ದಾನ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com