

ಥಾಣೆ: ಮೂರು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ರಸ್ತೆಯಲ್ಲಿ ಮಲಗಿದ್ದ ಭಿಕ್ಷುಕ ಸಾವನ್ನಪ್ಪಿರುವ ಘಟನೆ ಬಿವಂಡಿಯಲ್ಲಿ ನಡೆದಿದೆ.
ಮೊಹಮದ್ ಮೊಮಿನ್ ಮೃತ ವ್ಯಕ್ತಿ. ನಿಜಾಮ್ ಪುರದಲ್ಲಿದ್ದ ಸಮತಾ ಎಂಬ ಕಟ್ಟಡ ತೀರಾ ಹಳೆಯದಾಗಿ ಅಪಾಯದ ಅಂಚಿನಲ್ಲಿತ್ತು. ಹೀಗಾಗಿ ಆ ಕಟ್ಟಡದಲ್ಲಿದ್ದವರೆಲ್ಲಾ ಖಾಲಿ ಮಾಡಿದ್ದರು. ಮಧ್ಯರಾತ್ರಿ ಸುಮಾರು 1.30 ನಿಮಿಷಕ್ಕೆ ಕಟ್ಟಡ ಕುಸಿದಿದೆ.
ಕಟ್ಟಡದ ಪಕ್ಕದ ರಸ್ತೆಯಲ್ಲಿ ಮಲಗಿದ್ದ ಭಿಕ್ಷುಕ ಸಾವನ್ನಪ್ಪಿದ್ದಾನೆ ಎಂದು ಥಾಣೆ ಪೋಲೀಸರು ತಿಳಿಸಿದ್ದಾರೆ. ಪೊಲೀಸರು ಹಾಗೂ ಸ್ಥಳೀಯ ನಗರಸಭೆ ಸದಸ್ಯರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ, ಶವವನ್ನು ಹೊರತೆಗೆದಿದ್ದಾರೆ.