ಚಿಲ್ಲರೆ ಕೇಳಿ ಬ್ಯಾಂಕಿಗೆ ಹೋದರೆ ಸಿಕ್ಕಿದ್ದು ಬರೊಬ್ಬರಿ 15 ಕೆಜಿ ಚಿಲ್ಲರೆ!

ನೋಟು ನಿಷೇಧದ ಬಳಿಕ ಹಳೆಯ ನೋಟು ಬದಲಾವಣೆ ಹಾಗೂ ಚಿಲ್ಲರೆಗಾಗಿ ಭವಣೆ ಮುಂದುವರೆದಿರುವಂತೆಯೇ ದೆಹಲಿಯ ವ್ಯಕ್ತಿಯೋರ್ವ ಬ್ಯಾಂಕಿನಿಂದ ಬರೊಬ್ಬರಿ 15 ಕೆಜಿ ಚಿಲ್ಲರೆ ಪಡೆದಿದ್ದಾನೆ.
ಚಿಲ್ಲರೆ ಹಣ
ಚಿಲ್ಲರೆ ಹಣ
Updated on: 

ನವದೆಹಲಿ: ನೋಟು ನಿಷೇಧದ ಬಳಿಕ ಹಳೆಯ ನೋಟು ಬದಲಾವಣೆ ಹಾಗೂ ಚಿಲ್ಲರೆಗಾಗಿ ಭವಣೆ ಮುಂದುವರೆದಿರುವಂತೆಯೇ ದೆಹಲಿಯ ವ್ಯಕ್ತಿಯೋರ್ವ ಬ್ಯಾಂಕಿನಿಂದ ಬರೊಬ್ಬರಿ 15 ಕೆಜಿ ಚಿಲ್ಲರೆ ಪಡೆದಿದ್ದಾನೆ.

ಅರೆ 15 ಕೆಜಿ ಚಿಲ್ಲರೆಯೇ ಎಂದು ಅಚ್ಚರಿ ಪಡಬೇಡಿ, ಹೌದು ದೆಹಲಿ ಮೂಲದ ವ್ಯಕ್ತಿಗೆ ಸ್ಥಳೀಯ ಬ್ಯಾಂಕ್ ವೊಂದು 20 ಸಾವಿರ ರು.ಹಣಕ್ಕೆ ಬದಲಾಗಿ 10ರು. ಮುಖಬೆಲೆಯ ನಾಣ್ಯಗಳನ್ನು ಚಿಲ್ಲರೆಯಾಗಿ ನೀಡಿದೆ. ಬ್ಯಾಂಕಿನಲ್ಲಿ ನೋಟುಗಳು ಖಾಲಿಯಾಗಿದ್ದರಿಂದ ಬ್ಯಾಂಕ್ ಹಣ ವಿನಿಯಮ ಮಾಡಲು ಬಂದ ತನ್ನ ಗ್ರಾಹಕನಿಗೆ 20 ಸಾವಿರ ರೂಪಾಯಿಗೆ ನೋಟಿನ ಬದಲು 10 ರುಪಾಯಿ ನಾಣ್ಯಗಳನ್ನೇ ಕೊಟ್ಟು ಕಳುಹಿಸಿದೆ.

ದೆಹಲಿಯ ಸಣ್ಣ ವ್ಯಾಪಾಪರಿ ಇಮ್ತಿಯಾಜ್ ಅಲಾಂ ಅವರು ತಮಗೆ ತುರ್ತಾಗಿ ನಗದು ಬೇಕಿದ್ದರಿಂದ ತಮ್ಮ ಬಳಿ ಇದ್ದ 500, 1000 ರುಪಾಯಿ ಹಳೇ ನೋಟನ್ನು ವಿನಿಮಯ ಮಾಡಿಕೊಳ್ಳಲು ದೆಹಲಿಯ ಜಾಮಿಯಾ ಕೋ ಆಪರೇಟಿವ್ ಬ್ಯಾಂಕ್ ಗೆ ಹೋಗಿದ್ದಾರೆ. ಬ್ಯಾಂಕಿನಲ್ಲಿ ವಿನಿಯದ ಮೂಲಕ ಚಿಲ್ಲರೆ ಹಣ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬ್ಯಾಂಕ್ ಸಿಬ್ಬಂದಿ "ನಮ್ಮಲ್ಲಿ ಅಷ್ಟು ನಗದು ಇಲ್ಲ, ಅಲ್ಲದೇ ದಿನಕ್ಕೆ 2 ಸಾವಿರ ರುಪಾಯಿ ಮಾತ್ರ ವಿನಿಮಯ ಮಾಡಿಕೊಳ್ಳಬಹುದು ಎಂದು ಹೇಳಿದ್ದರು. ಆದರೆ ತನಗೆ ತುರ್ತಾಗಿ ಹಣ ಬೇಕೆಂದು ಅಲಾಂ ಮ್ಯಾನೇಜರ್ ಗೆ ಮನವಿ ಮಾಡಿದ್ದರಿಂದ ಬ್ಯಾಂಕ್ ಮ್ಯಾನೇಜರ್ 10 ರುಪಾಯಿ ನಾಣ್ಯವನ್ನೇ ತೆಗೆದುಕೊಳ್ಳುವಂತೆ ಸೂಚಿಸಿದರು ಎಂದು ಅಲಾಂ ತಿಳಿಸಿದ್ದಾರೆ.

ಆಲಂ ಕೂಡ ಒಲ್ಲದ ಮನಸ್ಸಿನಿಂದಲೇ ಅನ್ಯ ಮಾರ್ಗವಿಲ್ಲದೇ 20 ಸಾವಿರಕ್ಕೆ ನೋಟಿನ ಬದಲು ನಾಣ್ಯವನ್ನೇ ತೆಗೆದುಕೊಂಡಿದ್ದಾರೆ. ತಾನು ಹಣಕ್ಕಾಗಿ ಸುಮಾರು 5 ಗಂಟೆಗೂ ಅಧಿಕ ಸಮಯ ಸರತಿ ಸಾಲಲ್ಲಿ ನಿಂತಿದ್ದೇನೆ. ತಾನು ಕೆಲಸದ ನಿಮಿತ್ತ ಗೋವಾಕ್ಕೆ ತೆರಳಬೇಕಾಗಿದ್ದು, ಹೀಗಾಗಿ ನಾಣ್ಯವನ್ನೇ ತೆಗೆದುಕೊಂಡಿರುವುದಾಗಿ ಆಲಂ ವಿವರಿಸಿದ್ದಾರೆ.

ಈ ವಿಚಾರ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com