8 ಭಾರತೀಯ ಮೀನುಗಾರರ ದೋಣಿ ವಶಕ್ಕೆ ಪಡೆದ ಪಾಕಿಸ್ತಾನ!

ಪಾಕಿಸ್ತಾನದ ಕರಾವಳಿ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ 8 ಭಾರತೀಯ ಮೀನುಗಾರಿಕಾ ದೋಣಿಗಳನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಅಹ್ಮದಾಬಾದ್: ಪಾಕಿಸ್ತಾನದ ಕರಾವಳಿ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ 8 ಭಾರತೀಯ ಮೀನುಗಾರಿಕಾ ದೋಣಿಗಳನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನದ ನೌಕಾಪಡೆ (ಪಾಕಿಸ್ತಾನ ಮರಿಟೈಮ್ ಸೆಕ್ಯೂರಿಟಿ ಏಜೆನ್ಸಿ-ಪಿಎಂಎಸ್ ಎ)ಯ ಯೋಧರು ಇಂದು ಬೆಳಗ್ಗೆ ಗುಜರಾತ್ ನ ವಿವಾದಿತ ಗಡಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ 8 ಮೀನುಗಾರಿಕಾ ಬೋಟ್ ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ರಾಷ್ಟ್ರೀಯ ಮೀನುಗಾರರ ಒಕ್ಕೂಟ ಎನ್ ಎಫ್ ಎಫ್ ಸ್ಪಷ್ಟಪಡಿಸಿದ್ದು, 40 ಮಂದಿಯಿದ್ದ 8 ಮೀನುಗಾರಿಕಾ ಬೋಟ್ ಗಳನ್ನು ಪಾಕಿಸ್ತಾನ ವಶಕ್ಕೆ ಪಡೆದಿದೆ ಎಂದು ಹೇಳಿದೆ.

ಎನ್ ಎಫ್ ಎಫ್ ಕಾರ್ಯದರ್ಶಿ ಮನೀಷ್ ಲೊಧಾರಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು,  8 ಬೋಟ್ ಗಳಲ್ಲಿ 40ಕ್ಕೂ ಅಧಿಕ ಮಂದಿ ಮೀನುಗಾರರು ಇದ್ದರು ಎಂದು ಮಾಹಿತಿ ನೀಡಿದ್ದಾರೆ. ಈ ಪೈಕಿ ಗುಜರಾತ್ ನ ಪೋರ್ ಬಂದರ್ ಗೆ ಸೇರಿದ 7 ಮಂದಿ ಮೀನುಗಾರರೂ ಇದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ. ಇನ್ನು ಪಾಕಿಸ್ತಾನ ಸೇನೆ ಎಷ್ಟು ಮಂದಿ ಮೀನುಗಾರರನ್ನು ವಶಕ್ಕೆ ಪಡೆದಿದೆ ಎಂದು ಇನ್ನಷ್ಟೇ ಮಾಹಿತಿ ಬರಬೇಕಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com