ತ್ರಿಪುರ ವಿಧಾನಸಭೆ ಉಪಚುನಾವಣೆ: 2 ಕ್ಷೇತ್ರಗಳಲ್ಲಿ ಸಿಪಿಐ-ಎಂ ಜಯಭೇರಿ

ತ್ರಿಪುರ ವಿಧಾಸಭೆಯ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಸಿಪಿಐ-ಎಂ ಗೆಲವು ಸಾಧಿಸಿದೆ. ತ್ರಿಪುರದ ಬರ್ಜಾಲಾ ಮತ್ತು ಖೋವಾಯಿ - ಎರಡೂ ಕ್ಷೇತ್ರಗಳಲ್ಲಿ ...
ಸಿಪಿಐ-ಎಂ ಕಾರ್ಯಕರ್ತರ ವಿಜಯೋತ್ಸವ ಆಚರಣೆ
ಸಿಪಿಐ-ಎಂ ಕಾರ್ಯಕರ್ತರ ವಿಜಯೋತ್ಸವ ಆಚರಣೆ
Updated on: 

ಅಗರ್ತಲಾ: ತ್ರಿಪುರ ವಿಧಾಸಭೆಯ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಸಿಪಿಐ-ಎಂ ಗೆಲವು ಸಾಧಿಸಿದೆ. ತ್ರಿಪುರದ ಬರ್ಜಾಲಾ ಮತ್ತು ಖೋವಾಯಿ - ಎರಡೂ ಕ್ಷೇತ್ರಗಳಲ್ಲಿ ಸಿಪಿಐ-ಎಂ ಜಯಗಳಿಸಿದೆ.

ಸಿಪಿಐ-ಎಂ ಅಭ್ಯರ್ಥಿ ಜುಮು ಸರ್ಕಾರ್ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಶಿಷ್ಟ ಮೋಹನ್ ದಾಸ್ ಅವರನ್ನು  3,374 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಳೆದ ಜೂನ್ ನಲ್ಲಿ ಕಾಂಗ್ರೆಸ್ ಶಾಸಕ ಜಿತೇಂದ್ರ ಸರ್ಕಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು.

ಇನ್ನೂ ಖೋವಾಯ್ ವಿಧಾನ ಸಭೆ ಕ್ಷೇತ್ರದಲ್ಲಿ ಸಿಪಿಐ-ಎಂ ಅಭ್ಯರ್ಥಿ ಬಿಸ್ವಜಿತ್ ದತ್ತ ತಮ್ಮ ಪ್ರತಿಸ್ಪರ್ಧಿ ಟಿಎಂಸಿಯ ಮನೋಜ್ ದಾಸ್ ಅವರನ್ನು 16,047 ಮತಗಳ ಅಂತರದಿಂದ ಪರಾಜಯಗೊಳಿಸಿದ್ದಾರೆ. ಸಿಪಿಐಎಂ ಶಾಸಕ ಸಮೀರ್ ದಾಬ್ ನಿಧನದಿಂದ ಈ ಕ್ಷೇತ್ರ ತೆರವಾಗಿತ್ತು.

ಉಳಿದಂತೆ ಅಸ್ಸಾಂ, ಮಧ್ಯಪ್ರದೇಶ, ಪಶ್ಚಿಮ ಬಂಗಾಲ, ಅರುಣಾಚಲ ಪ್ರದೇಶ ಮತ್ತು ತಮಿಳು ನಾಡಿನಲ್ಲಿ  ನಡೆದಿದ್ದ ಉಪಚುನಾವಣೆಗಳ ಮತ ಎಣಿಕೆ ಕಾರ್ಯ ಮುಂದುವರಿಯತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com