ಪಾಕಿಸ್ತಾನದ ದೋಣಿ ಜಪ್ತಿ: 9 ಮಂದಿಯನ್ನು ವಶಕ್ಕೆ ಪಡೆದ ಕರಾವಳಿ ಪಡೆ

ಭಾರತ ಸಮುದ್ರ ಗಡಿಯೊಳಗೆ ಪ್ರವೇಶಿದ್ದ ಪಾಕಿಸ್ತಾನದ ದೋಣಿಯನ್ನು ಗುಜರಾತ್ ಪೋರ್ ಬಂದರ್ ನಲ್ಲಿ ಕರಾವಳಿ ಪಡೆ ಸಿಬ್ಬಂದಿ ಜಪ್ತಿ ಮಾಡಿದ್ದು 9...
ದೋಣಿ
ದೋಣಿ

ಪೋರ್ ಬಂದರ್(ಗುಜರಾತ್): ಭಾರತ ಸಮುದ್ರ ಗಡಿಯೊಳಗೆ ಪ್ರವೇಶಿದ್ದ ಪಾಕಿಸ್ತಾನದ ದೋಣಿಯನ್ನು ಗುಜರಾತ್ ಪೋರ್ ಬಂದರ್ ನಲ್ಲಿ ಕರಾವಳಿ ಪಡೆ ಸಿಬ್ಬಂದಿ ಜಪ್ತಿ ಮಾಡಿದ್ದು 9 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಪೋರ್ ಬಂದರ್ ಕರಾವಳಿಯಲ್ಲಿ ಬೆಳಗ್ಗೆ 10:15ರ ಸುಮಾರಿಗೆ ಸಮುದ್ರ ಗಡಿಯೊಳಗೆ ಪ್ರವೇಶಿದ್ದ ಪಾಕ್ ದೋಣಿಯನ್ನು ಸಮೀಪಿಸಿದ ಸಮುದ್ರ ಪಾವಕ್ ಹಡಗಿನ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ವೇಳೆ 9 ಮಂದಿ ಮೀನುಗಾರರು ಎಂದು ತಿಳಿದುಬಂದಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮೇಲಿನ ಭಾರತೀಯ ಸೇನೆಯ ಸೀಮಿತ ದಾಳಿಯ ಬಳಿಕ ಪಾಕಿಸ್ತಾನ ಮತ್ತು ಭಾರತ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಇದರಿಂದಾಗಿ ಭಾರತದ ಗಡಿಯೊಳಗೆ ಬರುವಂತೆ ದೋಣಿಗಳ ಮೇಲೆ ಕರಾವಳಿ ಪಡೆ ತೀವ್ರ ಕಣ್ಣಿಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com