
ನವದೆಹಲಿ: ಗಡಿ ಪ್ರದೇಶದಲ್ಲಿ ತನ್ನ ಸ್ವಂತ ಸಂಪನ್ಮೂಲಗಳನ್ನು ಬಳಸಿಕೊಳ್ಳು ಪಾಕಿಸ್ತಾನ ಹಾಗೂ ಚೀನಾ ರಾಷ್ಟ್ರಗಳು ಬಿಡುತ್ತಿಲ್ಲ ಎಂದು ಗೃಹ ಖಾತೆಯ ಸಹಾಯಕ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್ ಅವರು ಗುರುವಾರ ಹೇಳಿದ್ದಾರೆ.
ನೆರೆ ರಾಷ್ಟ್ರಕ್ಕೆ ಸಹಕಾರವನ್ನು ನೀಡುವ ಬದಲು ಪಾಕಿಸ್ತಾನ ಭಾರತಕ್ಕೆ ಸಮಸ್ಯೆಗಳನ್ನು ನೀಡುತ್ತಲೇ ಇದೆ, ಹೀಗಾಗಿ ಗಡಿ ಭಾಗದ ಪ್ರದೇಶದಲ್ಲಿರುವ ತನ್ನ ಸ್ವಂತ ಸಂಪನ್ಮೂಲಗಳನ್ನ ಬಳಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗುತ್ತಿಲ್ಲ. ಗಡಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ದೇಶವನ್ನು ರಕ್ಷಣೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ನಮ್ಮ ದೇಶದಲ್ಲಿರುವ ಭೂಮಿಯನ್ನು ಹಾಗೂ ಸಂಪನ್ಮೂಲಗಳನ್ನ ಬಳಕೆ ಮಾಡಿಕೊಳ್ಳಲು ಚೀನಾ ಮತ್ತು ಪಾಕಿಸ್ತಾನ ಬಿಡುತ್ತಿಲ್ಲ. ಇದರಿಂದಾಗಿ ಬ್ರಹ್ಮಪುತ್ರ ನದಿಯ ನೀರನ್ನು ಸೂಕ್ತ ರೀತಿಯಲ್ಲಿ ಹಾಗೂ ಸರಿಯಾದ ಸಮಯದಲ್ಲಿ ಬಳಕೆ ಮಾಡಿಕೊಳ್ಳಲು ದೇಶಕ್ಕೆ ಸಾಧ್ಯವಾಗುತ್ತಿಲ್ಲ. ಗಡಿಯಲ್ಲಿ ಸದಾಕಾಲ ಉದ್ವಿಗ್ನ ವಾತಾವರಣ ವಿರುವುದರಿಂದ ಖನಿಜ ನಿಕ್ಷೇಪಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮಲ್ಲಿರುವ ಖನಿಜ ಸಂಪನ್ಮೂಲಗಳನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಂಡಿದ್ದೇ ಆದರೆ, ನಮ್ಮ ರಾಷ್ಟ್ರ ಬಡತನ ಎಂಬ ಪಿಡುಗು ಕಾಡುವುದಿಲ್ಲ.
ಲಡಾಕ್ ನಲ್ಲಿ ಖನಿಜ ನಿಕ್ಷೇಪಗಳು ಸೇರಿದಂತೆ ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳಿವೆ. 10 ಕಿ.ಮೀ ದೂರ ಸಾಗುತ್ತಿದ್ದಂತೆ ಅಲ್ಲಿರುವ ಬೆಟ್ಟಗಳು ತನ್ನ ಬಣ್ಣಗಳನ್ನು ಬದಲಿಸುತ್ತಿರುತ್ತವೆ. ಭಾರತ ತನ್ನಲ್ಲಿರುವ ಶಕ್ತಿಯನ್ನು ಪ್ರದರ್ಶಿಸಿದೆ. ಹೆಚ್ಚಾಗಿ ಮಾತನಾಡುವವರು ಏನು ಮಾಡುತ್ತಾರೆ, ಮಾತನಾಡದವರು ಏನು ಮಾಡುತ್ತಾರೆಂಬುದನ್ನು ಇಂದು ವಿಶ್ವವೇ ನೋಡಿದೆ. ಎಂದು ತಿಳಿಸಿದ್ದಾರೆ.
Advertisement