
ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ಸಾಕ್ಷ್ಯಾಧಾರ ಕೇಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜಿವಾಲ್ ಅವರ ವಿರುದ್ಧ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಇದೀಗ ಕೇಜ್ರಿವಾಲ್ ವಿರುದ್ಧ ದೆಹಲಿಯಲ್ಲಿ ಕೆಲ ಪೋಸ್ಟರ್ ಗಳು ರಾರಾಜಿಸುತ್ತಿವೆ.
ಸೀಮಿತ ದಾಳಿ ಕುರಿತಂತೆ ಸಾಕ್ಷ್ಯಾಧಾರ ಕೇಳಿದ್ದ ಕೇಜ್ರಿವಾಲ್ ಅವರನ್ನು ರಾಜಧಾನಿ ದೆಹಲಿಯಲ್ಲಿ ಬಿಜೆಪಿಯ ಯುವ ಮೋರ್ಚಾ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಲೇವಡಿ ಮಾಡುವ ಕೆಲ ಪೋಸ್ಟರ್ ಗಳನ್ನು ಬಿಜೆಪಿಯ ಪ್ರಧಾನ ಕಾರ್ಯಾಲಯದ ಮುಂದೆ ಪ್ರದರ್ಶಿಸಿದೆ. ಮೊದಲು ಸೊಳ್ಳೆಗಳನ್ನು ಸಾಯಿಸಿ ನಂತರ ಸೀಮಿತ ದಾಳಿ ಕುರಿತ ಸಾಕ್ಷ್ಯಾಧಾರ ಕೇಳಿ ಎಂದು ಲೇವಡಿ ಮಾಡಲಾಗಿದೆ.
ಡೆಂಗಿ ಮತ್ತು ಚಿಕುನ್ ಗುನ್ಯಾ ರೋಗಗಳನ್ನು ನಿಯಂತ್ರಿಸುವಲ್ಲಿ ದೆಹಲಿ ಸರ್ಕಾರ ವಿಫಲವಾಗಿದ್ದು, ಇದನ್ನು ಅಣಕಿಸುವ ರೀತಿಯಲ್ಲಿ ದೊಡ್ಡ ಪೋಸ್ಟರ್ ವೊಂದನ್ನು ಪ್ರದರ್ಶಿಸಲಾಗುತ್ತಿದೆ. ಪೋಸ್ಟರ್ ನಲ್ಲಿ 'ಕುಚ್ಚ್ ಕರ್ಕೆ ತೋ ದಿಖಾವೋ'! ಡಿಯರ್ ಕೇಜ್ರಿವಾಲ್, ಮಚ್ಚರ್ ಸ್ಟ್ರೈಕ್ ಹೀ ಕರ್ಕೆ ದಿಖಾವೋ, ಆರೋಪ್ ಲಗಾನಾ ಛೋಡ್ಕರ್ ಕಾಮ್ ಕರೇ ದಿಲ್ಲಿ ಸರ್ಕಾರಿ: ಸುಪ್ರೀಕೋರ್ಟ್.
ಏನಾದರೂ ಮಾಡಿ ತೋರಿಸಿ. ಡಿಯರ್ ಕೇಜ್ರಿವಾಲ್, ಸೊಳ್ಳೆಗಳ ಮೇಲೆ ದಾಳಿ ಮಾಡಿ ತೋರಿಸಿ. ಆರೋಪ ಮಾಡುವುದನ್ನು ಬಿಟ್ಟು ಕೆಲಸ ಮಾಡು ದೆಹಲಿ ಸರ್ಕಾರ: ಸುಪ್ರೀಂಕೋರ್ಟ್. ಎಂಬ ರೀತಿಯ ರೀತಿಯ ಪೋಸ್ಟರ್ ಗಳನ್ನು ಪ್ರದರ್ಶಿಸಲಾಗುತ್ತಿದೆ.
Advertisement