150 ಪಾಕ್ ಬೇಹುಗಾರಿಕಾ ಪಾರಿವಾಳಗಳು ವಶಕ್ಕೆ: ತನಿಖೆಗೆ ಆದೇಶಿಸಿದ ಅಧಿಕಾರಿಗಳು

ಪಾಕಿಸ್ತಾನದ 150 ಬೇಹುಗಾರಿಕಾ ಪಾರಿವಾಳಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣವನ್ನು ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆಂದು ಭಾನುವಾರ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಮ್ಮು: ಪಾಕಿಸ್ತಾನದ 150 ಬೇಹುಗಾರಿಕಾ ಪಾರಿವಾಳಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣವನ್ನು ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆಂದು ಭಾನುವಾರ ತಿಳಿದುಬಂದಿದೆ.

ಅ.5 ರಂದು ಜಮ್ಮುವಿನ ವಿಕ್ರಮ್ ಚೌಕ್ ಪ್ರದೇಶದಲ್ಲಿ 150 ಪಾರಿವಾಳಗಳು ಬಾಳೆಹಣ್ಣಿನ ಬಾಕ್ಸ್ ಗಳನ್ನು ಹೊತ್ತೊಯ್ಯುತ್ತಿರುವುದನ್ನು ಸ್ಥಳೀಯರು ನೋಡಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕೆ ಬಂದಿದ್ದ ಪೊಲೀಸರು ಪಾರಿವಾಳಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೆ, ಪಾರಿವಾಳಗಳನ್ನು ಎನ್ ಜಿಒ ಸಂಸ್ಥೆಯೊಂದಕ್ಕೆ ನೀಡಿದ್ದಾರೆ.

ಪಾರಿವಾಳ ಕುರಿತಂತೆ ಎನ್ ಜಿಒ ಸಂಸ್ಥೆಯ ಮುಖ್ಯಸ್ಥರು ಮಾತನಾಡಿದ್ದು, ಪಾರಿವಾಳಗಳ ಮೇಲೆ ಜಮ್ಮುವಿನ ಉಪ ಆಯುಕ್ತರ ಕುರಿತಂತೆ ಕೆಲ ಪದಗಳನ್ನು ಬರೆಯಲಾಗಿದೆ. ಅಲ್ಲದೆ, ಪಾರಿವಾಳಗಳ ಕಾಲಿಗೆ ಕೆಲ ವಿಶೇಷವಾದ ಆಯಸ್ಕಾಂತೀಯ ರಿಂಗ್ ಗಳನ್ನೂ ಹಾಕಲಾಗಿದೆ. ಹೀಗಾಗಿ ಪಾರಿವಾಳಗಳನ್ನು ಬೇಹುಗಾರಿಕೆಗೆ ಬಳಸಿಕೊಳ್ಳಲಾಗುತ್ತಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.

ಬೇಹುಗಾರಿಕಾ ಪಾರಿವಾಳಗಳು ಭಾರತಕ್ಕೆ ಬರುತ್ತಿರುವುದು ಇದು ಮೊದಲೇನಲ್ಲ. ಕೆಲ ದಿನಗಳ ಹಿಂದಷ್ಟೇ ಗಡಿಯಲ್ಲಿ ಪಾಕಿಸ್ತಾನ ಮೂಲದ ಕೆಲ ಪಾರಿವಾಳಗಳು ಕಾಣಿಸಿಕೊಂಡಿದ್ದವರು. ಉರ್ದು ಭಾಷೆಯಲ್ಲಿ ಬರೆದಿರುವ ಕೆಲ ಬಲೂನ್ ಗಳನ್ನು ಪಾರಿವಾಳ ಕಾಲಿಗೆ ಕಟ್ಟಲಾಗಿತ್ತು. ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ ಬೆದರಿಯನ್ನು ಹಾಕಲಾಗಿದ್ದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com