ಚಹಾ ಮಾಡುತ್ತೇನೆ, ಡ್ರಮ್ ಭಾರಿಸುತ್ತೇನೆ, ನಾನೂ ಪ್ರಧಾನಿಯಾಗಲು ಅರ್ಹ: ಆಜಂ ಖಾನ್

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೋಲಿಸಿಕೊಂಡಿರುವ ಆಜಂ ಖಾನ್, ನರೇಂದ್ರ ಮೋದಿ ಅವರಂತೆ ನಾನು ಸಹ ಚಹಾ ಮಾಡುತ್ತೇನೆ, ಡ್ರಮ್ ಭಾರಿಸುತ್ತೇನೆ, ಆದ್ದರಿಂದ ನಾನೂ ಉತ್ತಮ ಪ್ರಧಾನಿ ಅಭ್ಯರ್ಥಿ ಎಂದು ಆಜಂ ಖಾನ್ ಹೇಳಿದ್ದಾರೆ.
ಆಜಂ ಖಾನ್
ಆಜಂ ಖಾನ್

ಲಖನೌ: ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಪ್ರಧಾನಿಯಾಗುವ ತಮ್ಮ ಇಚ್ಛೆಯನ್ನು ಮತ್ತೊಮ್ಮೆ ಹೇಳಿಕೊಂಡಿದ್ದಾರೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೋಲಿಸಿಕೊಂಡಿರುವ ಆಜಂ ಖಾನ್, ನರೇಂದ್ರ ಮೋದಿ ಅವರಂತೆ ನಾನು ಸಹ ಚಹಾ ಮಾಡುತ್ತೇನೆ, ಡ್ರಮ್ ಭಾರಿಸುತ್ತೇನೆ, ಆದ್ದರಿಂದ ನಾನೂ ಉತ್ತಮ ಪ್ರಧಾನಿ ಅಭ್ಯರ್ಥಿ ಎಂದು ಆಜಂ ಖಾನ್ ಹೇಳಿದ್ದಾರೆ.

ನರೇಂದ್ರ ಮೋದಿ ಅವರಂತೆಯೇ ನಾನು ಸಹ ಉತ್ತಮವಾಗಿ ಉಡುಪು ಧರಿಸುತ್ತೇನೆ, ಹಾಗಾಗಿ ನಾನೂ ಸಹ ಪ್ರಧಾನಿಯಾಗಲು ಅರ್ಹ ಎಂದು ಆಜಂ ಖಾನ್ ತಿಳಿಸಿದ್ದಾರೆ. ಇನ್ನು ತಾವು ಪ್ರಧಾನಿಯಾದರೆ ಆರು ತಿಂಗಳಲ್ಲಿ ಪ್ರತಿಯೊಬ್ಬರ ಖಾತೆಯಲ್ಲೂ 20 ಲಕ್ಷ ರೂಪಾಯಿ ಜಮಾವಣೆ ಮಾಡುತ್ತೇನೆ, ನಾನು ಪ್ರಧಾನಿಯಾದರೆ ಬೇರೆಯವರ ರೀತಿ ಕೊಟ್ಟ ಮಾತನ್ನು ಮರೆಯುವುದಿಲ್ಲ ಎಂದು ಆಜಂ ಖಾನ್ ಹೇಳಿದ್ದಾರೆ.

ಗಡಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿ, ದೇಶದ ಜನರು ಹಸಿವಿನಿಂದ ಇದ್ದರೆ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಶಾಲು ಕಳಿಸಿ ಮಾವಿನ ಹಣ್ಣುಗಳನ್ನು ವಾಪಸ್ ಪಡೆಯುತ್ತಿದ್ದಾರೆ. ಇದನ್ನು 2017 ರ ಉತ್ತರ ಪ್ರದೇಶದ ಚುನಾವಣೆಯಲ್ಲಿ ರಾಜಕೀಯ ಲಾಭವಾಗಿ ಬಳಸಿಕೊಳ್ಳಲಿದ್ದಾರೆ ಎಂದು ಆಜಂ ಖಾನ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೆ ವೇಳೆ ಮಾಧ್ಯಮಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಆಜಂ ಖಾನ್, ನ್ಯೂಸ್ ಚಾನಲ್ ಗಳ ಬದಲು ನಾನು ಮನರಂಜನಾ ಚಾನಲ್ ಗಳನ್ನು ವೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com