ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಹಾಗೂ ಎಎಪಿ ಐವರು ಮುಖಂಡರು ತಮ್ಮ ವಿರುದ್ಧ ಸುಳ್ಳು ಮತ್ತು ಮಾನಹಾನಿಕರ ಆರೋಪ ಮಾಡಿದ್ದಾರೆ ಎಂದು ಅರುಣ್ ಜೇಟ್ಲಿ ಅವರು ಮೊಕದ್ದಮೆ ದಾಖಲಿಸಿದ್ದರು. ಕೇಜ್ರಿವಾಲ್ ಸೇರಿದಂತೆ ಕುಮಾರ್ ವಿಶ್ವಾಸ್, ಸಂತೋಷ್ ಸಿಂಗ್, ರಾಘವ ಛಡ್ಡಾ ಮತ್ತು ದೀಪಕ್ ವಾಜಪೇಯಿ ವಿರುದ್ಧ ದೂರು ದಾಖಲಾಗಿದೆ.