

ಮುಂಬಯಿ: ಕಲರ್ಸ್ ವಾಹಿನಿಯ ಪ್ರಸಿದ್ದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಿರುವ ವಿಷಯವನ್ನು ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ ಖಚಿತಪಡಿಸಿದ್ದಾರೆ.
ಕಲರ್ಸ್ ವಾಹಿನಿ ಮತ್ತು ಕಾರ್ಯಕ್ರಮ ನಿರ್ಮಾಪಕರ ಜತೆ ನಡೆದ ಸಭೆಯಲ್ಲಿ ಮಹಿಳೆಯಿಂದ ಹಿನ್ನೆಲೆ ದನಿ ಇದ್ದರೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿದ್ಧ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.
ಷರತ್ತಿನ ಬಗ್ಗೆ ಚರ್ಚಿಸಿದ ಬಳಿಕ ಸಂಪರ್ಕಿಸಲು ಸೂಚಿಸಿದ್ದೇನೆ’ ಎಂದು ಹೇಳಿದರು. ಸದ್ಯ ನಿಗದಿಯಾಗಿರುವ ಕಾರ್ಯಕ್ರಮಕ್ಕೆ ಮಹಿಳೆಯ ಹಿನ್ನೆಲೆ ದನಿ ಒದಗಿಸುವುದು ಕಷ್ಟವಾಗಲಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಬರುವ ವರ್ಷದಿಂದ ಈ ಬದಲಾವಣೆ ಮಾಡುವ ಭರವಸೆಯನ್ನು ವಾಹಿನಿ ನೀಡಿದರೆ ಆಹ್ವಾನ ಒಪ್ಪಿಕೊಳ್ಳುತ್ತೇನೆ ಎಂದು ವಿವರಿಸಿದರು. ಅಕ್ಟೋಬರ್ ತಿಂಗಳಿನಿಂದ ಹಿಂದಿ ಭಾಷೆಯಲ್ಲಿ ಬಿಗ್ ಬಾಸ್ ನ ಹೊಸ ಸೀಸನ್ ಪ್ರಾರಂಭವಾಗಲಿದೆ.