
ಶ್ರೀನಗರ: ಪಾಕಿಸ್ತಾನದ ಮೇಲಿರುವ ಪ್ರಾಮಾಣಿಕತೆಯನ್ನು ತಮ್ಮ ನಾಯಕರ ಎದುರು ಪ್ರದರ್ಶಿಸಿ, ಅವರ ವಿಶ್ವಾಸ ಗೆಲ್ಲುವ ಸಲುವಾಗಿ ಪ್ರತ್ಯೇಕತಾವಾದಿಗಳು ಕಾಶ್ಮೀರದಲ್ಲಿ ಹಿಂಸಾಚಾರ ಹೆಚ್ಚಾಗುವಂತೆ ಮಾಡುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಪಾಕಿಸ್ತಾನದ ಮೇಲಿರುವ ತಮ್ಮ ಪ್ರಾಮಾಣಿಕತೆಯನ್ನು ಪ್ರತೀಯೊಬ್ಬ ಪ್ರತ್ಯೇಕತಾವಾದಿಯೂ ಪ್ರದರ್ಶಿಸಬೇಕೆಂದು ಪಾಕಿಸ್ತಾನ ಮೂಲದ ಕೆಲ ಉಗ್ರ ಸಂಘಟನೆಗಳು ಒತ್ತಡ ಹೇರುತ್ತಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ನಾಯಕರ ವಿಶ್ವಾಸ ಗಿಟ್ಟಿಸಿಕೊಳ್ಳುವ ಸಲುವಾಗಿ ಪ್ರತ್ಯೇಕತಾವಾದಿಗಳು ಪ್ರತಿಭಟನೆಗಳಿಗೆ ಕರೆ ನೀಡುತ್ತಿದ್ದಾರೆಂದು ಹೇಳಲಾಗುತ್ತಿದೆ.
ಉಗ್ರ ಸಂಘಟನೆಗಳ ಒತ್ತಡಕ್ಕೆ ಮಣಿದು, ಪ್ರಾಮಾಣಿಕತೆ ಪ್ರದರ್ಶಿಸಲು ಗಿಲಾನಿ ಅವರು ಪ್ರತಿಭಟನೆಗಳಿಗೆ ಕರೆ ನೀಡುತ್ತಿದ್ದಾರೆ. ಇದರ ಪರಿಣಾಮವೇ ಕಾಶ್ಮೀರದಲ್ಲಿ ಹಿಂಸಾಚಾರ ಇಂದಿಗೂ ಮುಂದುವರೆಯಲು ಕಾರಣವಾಗುತ್ತಿದೆ ಎಂದು ತಿಳಿದುಬಂದಿದೆ.
2008ರಲ್ಲೂ ಅಮರನಾಥ ಭೂ ಚಳುವಳಿ ಸಂದರ್ಭದಲ್ಲೂ ಗಿಲಾನಿ,ಮಿರ್ವೇಜ್ ಮತ್ತು ಯಾಸಿನ್ ಮಲಿಕ್ ಮೂರು ಪ್ರತ್ಯೇಕತಾವಾದಿಗಳು ಪ್ರತಿಭಟನೆಗಳಿಗೆ ಕೈ ಜೋಡಿಸಿದ್ದರು. ವಿವಾದ ಕುರಿತ ಪ್ರತಿಭಟನೆಗೆ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಪ್ರಮುಖವಾಗಿ ಉಗ್ರ ಹಫೀಜ್ ಸಯೀದ್ ಪ್ರತ್ಯೇಕತಾವಾದಿಗಳಲ್ಲೊಬ್ಬರು ದನಿಯಾಗಬೇಕೆಂದು ಬಯಸಿದ್ದರು. ಪ್ರತ್ಯೇಕತಾವಾದಿಗಳು ಪ್ರತಿಭಟನೆ ಹಿಂದೆ ದನಿಯಾಗಿದ್ದಾರೆ ಪ್ರತಿಭಟನೆಯ ಶಕ್ತಿ ಮತ್ತಷ್ಟು ಹೆಚ್ಚಾಗುತ್ತದೆ ಹಾಗೂ ಭಾರತ ಮೇಲೆ ಒತ್ತಡವನ್ನು ಹೆಚ್ಚಿಸಬಹುದೆಂಬುದು ಅವರ ಅನಿಸಿಕೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿಗಳು ಯಾವುದೇ ಗೊಂದಲವಿಲ್ಲದೆ ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಉಗ್ರ ಸಂಘಟನೆಗಳು ಒತ್ತಡ ಹೇರಲು ಆರಂಭಿಸಿದ್ದರು. ಇದೇ ರೀತಿಯ ಒತ್ತಡ ಇಂದೂ ಕೂಡ ಪ್ರತ್ಯೇಕತಾವಾದಿಗಳ ಮೇಲೆ ಹೇರಲಾಗುತ್ತಿದ್ದು. ಇದರ ಪರಿಣಾಮದಿಂದಲೇ ಕಾಶ್ಮೀರದಲ್ಲಿ ಹಿಂಸಾಚಾರ ಮುಂದುವರೆಯಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರತ್ಯೇಕತಾವಾದಿಗಳ ಮೇಲೆ ಉಗ್ರ ಸಂಘಟನೆಗಳು ಅಂದು ಹೇರಿದ್ದತಂಹ ಒತ್ತಡವೇ ಇಂದೂ ಕೂಡ ಹೇರಲಾಗುತ್ತಿದ್ದು, ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಿದ್ದ ಬುರ್ಹಾನ್ ವಾನಿ ಬಗೆಗಿನ ಸಾಕ್ಷ್ಯಾಧಾರಗಳನ್ನು ನಾಶ ಪಡಿಸಲು ಸಾಕಷ್ಟು ಯತ್ನಗಳು ಈಗಲೂ ನಡೆಯುತ್ತಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement