

ಕೊಲಂಬೋ: ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಕ್ರಮವನ್ನು ಖಂಡಿಸಿ ಭಾರತ, ಭೂತಾನ್, ನೇಪಾಳ ಬಾಂಗ್ಲಾದೇಶ ಪಾಕ್ ನಲ್ಲಿ ನಡೆಯಬೇಕಿದ್ದ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದವು. ಈಗ ಶ್ರೀಲಂಕಾ ಸಹ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದೆ.
ಕೊಲಂಬೊದಲ್ಲಿರುವ ಶ್ರೀಲಂಕಾದ ವಿದೇಶಾಂಗ ಸಚಿವಾಲಯ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಸಾರ್ಕ್ ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದೆ. ಪ್ರಾದೇಶಿಕ ಸಹಕಾರಕ್ಕೆ ಶಾಂತಿ ಮತ್ತು ಭದ್ರತೆ ಪ್ರಮುಖವಾದ ಅಂಶಗಳಾಗಿವೆ ಎಂದಿರುವ ಶ್ರೀಲಂಕಾ, ಶೃಂಗಸಭೆಗೆ ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಇದೆ ವೇಳೆ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಖಂಡಿಸುವುದಾಗಿ ಶ್ರೀಲಂಕಾ ಹೇಳಿದೆ.