ಭಾರತ ಗಡಿಯಲ್ಲಿ ರಾಫೆಲ್ ಜೆಟ್ ಗಳನ್ನು ನಿಯೋಜಿಸುವ ಸಾಧ್ಯತೆ ಇದೆ: ಚೀನಾ ಪತ್ರಿಕೆಯ ಆತಂಕ

ಭಾರತ ಚೀನಾ ಹಾಗು ಪಾಕಿಸ್ತಾನದೊಂದಿಗಿನ ತನ್ನ ಗಡಿ ಪ್ರದೇಶದಲ್ಲಿ ರಾಫೆಲ್ ಜೆಟ್ ಗಳನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದೆ.
ಚೀನಾ
ಚೀನಾ

ಬೀಜಿಂಗ್: ಭಾರತ ಫ್ರಾನ್ಸ್ ನಡುವೆ ರಾಫೆಲ್ ಜೆಟ್ ಒಪ್ಪಂದ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ನೆರೆ ರಾಷ್ಟ್ರ ಚೀನಾಗೆ ಆತಂಕ ಉಂಟಾದಂತಿದ್ದು, ಭಾರತ ಚೀನಾ ಹಾಗು ಪಾಕಿಸ್ತಾನದೊಂದಿಗಿನ ತನ್ನ ಗಡಿ ಪ್ರದೇಶದಲ್ಲಿ ರಾಫೆಲ್ ಜೆಟ್ ಗಳನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದೆ.

ಈ ಬಗ್ಗೆ ವರದಿ ಪ್ರಕಟಿಸಿರುವ ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್, ಭಾರತ ತನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಗಡಿ ಪ್ರದೇಶದಲ್ಲಿ ರಾಫೆಲ್ ಜೆಟ್ ಗಳನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ಚೀನಾ ಪತ್ರಿಕೆ ಹೇಳಿದೆ. ಭಾರತ ವಿಶ್ವದಲ್ಲೇ ಅತಿ ದೊಡ್ಡ ಆಮದುದಾರ ರಾಷ್ಟ್ರವಾಗಿದೆ ಎಂದು ದಿ ಸ್ಟಾಕ್ ಹೊಲ್ಮ್ ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್(ಎಸ್ಐಪಿಆರ್ ಐ) ವರದಿ ಪ್ರಕಟವಾಗಿದೆ.

ಮಧ್ಯಪ್ರಾಚ್ಯರಾಷ್ಟ್ರಗಳಲ್ಲಿ ಭದ್ರತೆಯ ಅಸ್ಥಿರತೆ ಉಂಟಾಗಿರುವುದು ಏಷ್ಯಾದಲ್ಲಿ ಶಸ್ತ್ರಾಸ್ತ್ರಗಳ ಆಮದು ಹೆಚ್ಚುತ್ತಿರುವುದಕ್ಕೆ ಹಾಗೂ ಚೀನಾದ ನೆರೆ ರಾಷ್ಟ್ರಗಳಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ ಎಂದು ಚೀನಾ ಮಾಧ್ಯಮ ಅಭಿಪ್ರಾಯಪಟ್ಟಿದೆ.

ಭಾರತ ಇತ್ತೀಚೆಗಷ್ಟೇ 59 ಸಾವಿರ ಕೋಟಿ ಮೊತ್ತದಲ್ಲಿ 36 ರಾಫೆಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿಹಾಕಿತ್ತು. ಈ ಬೆನ್ನಲ್ಲೇ ಚೀನಾ ಮಾಧ್ಯಮ ರಾಫೆಲ್ ಜೆಟ್  ಗಳನ್ನು ಭಾರತ ಚೀನಾವನ್ನು ಬೆದರಿಸಲು ಬಳಕೆ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿರುವುದು, ಚೀನಾಗೆ ಭಾರತದ ಬಗ್ಗೆ ನಡುಕ ಸೃಷ್ಟಿಯಾದಂತಿದೆ ಎಂಬುದನ್ನು ಸೂಚಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com