ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಿಆರ್'ಪಿಎಪ್ ಡೈರೆಕ್ಟರ್ ಜನರಲ್ ಸುದೀಪ್ ಲಖ್ತಾಕಿಯಾ ಅವರು, ತರಬೇತಿ ಶಿಬಿರಕ್ಕೆ ಹೋಗಿದ್ದ ಯೋಧರಿಗೆ ಮೀನಿನ ಆಹಾರವನ್ನು ನೀಡಲಾಗಿದೆ. ಆಹಾರ ಸೇವಿಸುತ್ತಿದ್ದಂತೆಯೇ ಯೋಧರಿಗೆ ವಾಕರಿಕೆ ಬರಲು ಆರಂಭವಾಗಿದೆ. ನಂತರ ಹಲವು ಯೋಧರು ಹೊಟ್ಟೆನೋವು ಹಾಗೂ ವಾಂತಿ ಆರಂಭವಾಗಿತ್ತು. ಕೂಡಲೇ ಯೋಧರಿಗೆ ಪ್ರಾಥಮಿಕ ಚಿಕಿತ್ಸೆನೀಡಿ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿತ್ತು ಎಂದು ಹೇಳಿದ್ದಾರೆ.