ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಅಗ್ಗದ ಪ್ರಚಾರಕ್ಕಾಗಿ ಕೆಲ ಕಲ್ಲು ತೂರಾಟಗಾರರ ಜೊತೆ ಸೇರಿಕೊಂಡಿದ್ದಾರೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಖ್ ಅಬ್ದುಲ್ಲಾ ಮತ್ತು ಓಮರ್ ಅಬ್ದುಲ್ಲಾ ಸದಾ ಸುದ್ದಿಯಲ್ಲಿರಬೇಕೆಂಬ ಬಯಕೆಯಿಂದಾಗಿ ಉಗ್ರರ ಜೊತೆ ಕೈ ಜೋಡಿಸಿದ್ದಾರೆ ಎಂದು ದೂರಿದ್ದಾರೆ.
ಈ ಇಬ್ಬರನ್ನು ಒಪ್ಪಿಕೊಳ್ಳುವುದು ಕಾಶ್ಮೀರದ ಜನತೆಗೆ ಕಷ್ಟವಾಗಿದೆ ಎಂದು ತಿಳಿಸಿರುವ ಅವರು ಪ್ರಚಾರ ಪಡೆಯಲು ಬೇರೆ ದಾರಿಯಿಲ್ಲದ ಕಾರಣ ಉಗ್ರರ ಜೊತೆ ಸೇರಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಕಾಶ್ಮೀರದಲ್ಲಿರುವ ಮುಸ್ಲಿಮರು ಬದಲಾಗಲು ಅಥವಾ ದೇಶ ಭಕ್ತರಾಗಲು ಸಾಧ್ಯವಿಲ್ಲ, ಒಂದು ವೇಳೆ ಅವರು ಬದಲಾಗಲು ಯತ್ನಿಸಿದರೇ ಉಗ್ರಗಾಮಿಗಳು ಅವರನ್ನು ಕೊಲ್ಲುತ್ತಾರೆ ಎಂದು ಹೇಳಿದ್ದಾರೆ.