ಟ್ವಿಟರ್ ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಚಿದಂಬರಂ, ರೈಲ್ವೆ ಇಲಾಖೆಯ ಸಮಸ್ಯೆ ಆಳವಾದದ್ದು ಅದನ್ನು ಸರ್ಕಾರಿ ಇಲಾಖೆಯಂತೆ ನಡೆಸಲು ಸಾಧ್ಯವಿಲ್ಲ. ರೈಲ್ವೆ ಇಲಾಖೆ ಒಂದು ರೂಪಾಯಿ ಆದಾಯ ಗಳಿಸಬೇಕಾದರೆ ಎಷ್ಟು ಖರ್ಚು ಮಾಡಬೇಕೆಂಬುದನ್ನು ಕಾರ್ಯನಿರ್ವಹಣೆಯ ಅನುಪಾತ ತೋರಿಸುತ್ತದೆ. ಉದಾಹರಣೆಗೆ 100 ಪೈಸೆಗಳನ್ನು (ಒಂದು ರೂಪಾಯಿ) ಗಳಿಸಲು ರೈಲ್ವೆ ಇಲಾಖೆ 94.9 ಪೈಸೆಯನ್ನು ಖರ್ಚು ಮಾಡುತ್ತಿದೆ. ಕಾರ್ಯನಿರ್ವಹಣೆಯ ಅನುಪಾತ ಉಳಿದ ವರ್ಷಗಳಿಗೆ ಹೋಲಿಸಿದರೆ 2016-17 ರಲ್ಲಿ ಆತಂಕಕಾರಿಯಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.