ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ವೇಳೆ ಮೂತ್ರ ಸೇವಿಸಿದ ತಮಿಳುನಾಡು ರೈತರು!

ಬರಗಾಲಕ್ಕೆ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ...
ಪ್ರತಿಭಟನಾ ನಿರತ ರೈತರು
ಪ್ರತಿಭಟನಾ ನಿರತ ರೈತರು
Updated on
ನವದೆಹಲಿ: ಬರಗಾಲಕ್ಕೆ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ತಮಿಳುನಾಡು ರೈತರು ಇಂದು ಕೇಂದ್ರ ಸರ್ಕಾರದ ಗಮನ ಸೆಳೆಯಲು ತಮ್ಮ ಮೂತ್ರವನ್ನೇ ಕುಡಿದ ಪ್ರಸಂಗ ನಡೆದಿದೆ.
ತಮಿಳುನಾಡು ರಾಜ್ಯದಲ್ಲಿ ಕಳೆದ ವರ್ಷ ತೀವ್ರ ಬರಗಾಲ ಮತ್ತು ಕರ್ನಾಟಕದಿಂದ ಕಾವೇರಿ ನೀರು ಬಿಡುಗಡೆ ಮಾಡದ್ದರಿಂದ ಬಹುಪಾಲು ರೈತರಿಗೆ ಬೆಳೆ ನಷ್ಟವುಂಟಾಗಿತ್ತು. ಇದರಿಂದ ನೊಂದ ರೈತರು ಇಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು.
 ಕೇಂದ್ರ ಸರ್ಕಾರ ರಾಜ್ಯಕ್ಕೆ ಪರಿಹಾರ ಬಿಡುಗಡೆ ಮಾಡಿದೆ. ಆದರೆ ಅದು ಬೇಡಿಕೆಯಿಟ್ಟದ್ದಕ್ಕಿಂತ ಕಡಿಮೆಯಾಗಿದೆ ಎಂದು ಆರೋಪಿಸಿದ ರೈತರು ತಮ್ಮ ಮೂತ್ರವನ್ನೇ ಕುಡಿದದ್ದು ಮಾತ್ರವಲ್ಲದೆ ಸೀರೆ ಉಟ್ಟು, ಸತ್ತ ಇಲಿಗಳನ್ನು ತಿಂದು ಅರೆನಗ್ನವಾಗಿ ಕುಳಿತು ಸತ್ತ ರೈತರ ತಲೆಬುರುಡೆಗಳನ್ನು ಕುತ್ತಿಗೆಗೆ ನೇತಾಡಿಸಿಕೊಂಡರು.
ಪ್ರತಿಭಟನೆಯ ಮುಖಂಡತ್ವ ವಹಿಸಿದ ಪಿ.ಅಯ್ಯಕ್ಕನು, ಸರ್ಕಾರ ನಮಗೆ ನೀರು ಕೊಡುತ್ತಿಲ್ಲ. ಹೀಗಾಗಿ ನಾವು ಮೂತ್ರ ಕುಡಿಯುತ್ತೇವೆ ಎಂದರು.ತಮ್ಮ ಬೇಡಿಕೆಯನ್ನು ಒಂದು ದಿನದಲ್ಲಿ ಈಡೇರಿಸದಿದ್ದರೆ ಮೂತ್ರ ಕುಡಿಯುವುದಾಗಿ ಹೇಳಿದ್ದರು.
ಕಳೆದ 39 ದಿನಗಳಲ್ಲಿ ಮೀಸೆಯ ಅರ್ಧದಷ್ಟು ಕತ್ತರಿಸಿ ತಮ್ಮ ಬಾಯಿಯಲ್ಲಿ ಇಟ್ಟುಕೊಂಡ ಇಲಿಗಳು ಮತ್ತು ಹಾವುಗಳು ಅಣಕು ಅಂತ್ಯಕ್ರಿಯೆಗಳನ್ನು ನಡೆಸಿದ್ದರು, ಸಾಲದ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಇತರ ರೈತರ ತಲೆಬುರುಡೆಗಳನ್ನು ಒಯ್ದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com