ಭಾರತವನ್ನು ವಿಶ್ವದ ಅತ್ಯಂತ ಬಡ, ಅನಕ್ಷರಸ್ಥ, ರೋಗಗ್ರಸ್ಥ ರಾಷ್ಟ್ರದ ಸ್ಥಾನಕ್ಕೆ ಇಳಿಸಿದ್ದ ಬ್ರಿಟನ್ ಸಾಮ್ರಾಜ್ಯ ಮಾನವೀಯತೆ ಮೇಲೆ ನಡೆಸಿದ್ದ ಅಪರಾಧಗಳ ಬಗ್ಗೆ ಭಾರತ ಹಾಗೂ ಬ್ರಿಟನ್ ನ ಜನತೆಗೆ ವ್ಯಾಪಕವಾಗಿ ತಿಳಿಸಬೇಕು ಎಂದಿರುವ ಶಶಿ ತರೂರ್, ಭಾರತದಲ್ಲಿ ಇದಕ್ಕಾಗಿಯೇ ಮ್ಯೂಸಿಯಂ ಒಂದನ್ನು ಪ್ರಾರಂಭಿಸಬೇಕೆಂದು ಹೇಳಿದ್ದಾರೆ.