ಕಣಿವೆ ರಾಜ್ಯದಲ್ಲಿ ಭದ್ರತಾ ಪಡೆಗಳು ಪೆಲ್ಲೆಟ್ ಗನ್ ಗಳನ್ನು ಉಪಯೋಗಿಸುವುದನ್ನು ವಿರೋಧಿಸಿ ಜಮ್ಮು-ಕಾಶ್ಮೀರದ ಬಾರ್ ಅಸೋಸಿಯೇಷನ್ ಸುಪ್ರೀಂ ಕೋರ್ತ್ ಮೊರೆ ಹೋಗಿತ್ತು. ಬಾರ್ ಅಸೋಸಿಯೇಷನ್ ನ ಅರ್ಜಿ ವಿಚಾರಣೆ ವೇಳೆಯಲ್ಲಿ ನ್ಯಾಯಾಲಯಕ್ಕೆ ಹೇಳಿಕೆ ಸಲ್ಲಿಸಿರುವ ಕೇಂದ್ರ ಸರ್ಕಾರ, ಕಾಶ್ಮೀರದ ಅಸ್ಥಿರತೆಯನ್ನು ಬಗೆಹರಿಸುವ ಭಾಗವಾಗಿ ಕಲ್ಲು ತೂರಾಟ ಮಾಡುವವರೊಂದಿಗೆ, ಪ್ರತ್ಯೇಕತಾವಾದಿ ಹುರಿಯತ್ ನಾಯಕರೊಂದಿಗೆ, ಆಜಾದಿ ಬಯಸುವವರೊಂದಿಗೆ ಮಾತುಕತೆ ನಡೆಸುವುದಿಲ್ಲ. ಮಾತುಕತೆ ನಡೆಸುವುದೇನಿದ್ದರೂ ಕಾನೂನುಬದ್ಧವಾಗಿ ಅನುಮತಿ ನೀಡಲಾದವರೊಂದಿಗೆ ಜನರ ಪರವಾಗಿರುವವರೊಂದಿಗೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.