ತಮಿಳುನಾಡು ಬಸ್ ಡ್ರೈವರ್ ಗಳ ರೇಸ್ ನಿಂದಾಗಿ ಬಾಯಿಗೆ ಬಂತು ಪ್ರಯಾಣಿಕರ ಜೀವ!

ತಮಿಳುನಾಡಿನ ಇಬ್ಬರು ಬೇಜವಾಬ್ದಾರಿ ಬಸ್ ಚಾಲಕರಿಂದಾಗಿ ಅದರೊಳಗಿದ್ದ ಪ್ರಯಾಣಿಕರಿಗೆ ಜೀವವನ್ನು ಕೈಯಲ್ಲಿ ಹಿಡಿದ ಅನುಭವವಾಗಿದೆ.
ಸ್ಪರ್ಧೆಗೆ ಬಿದ್ದು ಬಸ್ ಚಲಾಯಿಸಿದ ಚಾಲಕರು
ಸ್ಪರ್ಧೆಗೆ ಬಿದ್ದು ಬಸ್ ಚಲಾಯಿಸಿದ ಚಾಲಕರು

ಚೆನ್ನೈ: ತಮಿಳುನಾಡಿನ ಇಬ್ಬರು ಬೇಜವಾಬ್ದಾರಿ ಬಸ್ ಚಾಲಕರಿಂದಾಗಿ ಅದರೊಳಗಿದ್ದ ಪ್ರಯಾಣಿಕರಿಗೆ ಜೀವವನ್ನು ಕೈಯಲ್ಲಿ ಹಿಡಿದ ಅನುಭವವಾಗಿದೆ.

ತಮಿಳುನಾಡಿನ ಕೊಯಮತ್ತೂರು-ಪೊಲ್ಲಾಚಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಎರಡು ಖಾಸಗಿ ಬಸ್ ಗಳು ಇದ್ದಕ್ಕಿದ್ದಂತೆ ಸ್ಪರ್ಧೆಗಳಿದಿದ್ದು, ಹಳ್ಳ ದಿಣ್ಣೆ ಅಷ್ಟೇ ಏಕೆ ಒನ್ ವೇ ಕೂಡ ನೋಡದೇ ಏಕಾಏಕಿ ರಸ್ತೆಯ ಉಭಯ ಬದಿಗಳಲ್ಲಿ  ಅತ್ಯಂತ ವೇಗವಾಗಿ ಬಸ್ ಗಳನ್ನು ಚಲಾಯಿಸಿದ್ದಾರೆ. ಬಸ್ ಗಳ ಹಿಂಬದಿಯಲ್ಲಿ ಬರುತ್ತಿದ್ದ ಬೈಕ್ ಚಾಲಕರೊಬ್ಬರು ಇದನ್ನು ತಮ್ಮ ಮೊಬೈಲ್ ಮೂಲಕ ಚಿತ್ರೀಕರಿಸಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.

ಇನ್ನು ತಮಿಳುನಾಡಿನ ವಿವಿಧೆಡ ಭಾರಿ ವಾಹನಗಳು ಹೆದ್ದಾರಿಗಳಲ್ಲಿ ಸ್ಪರ್ಧೆಗಳಿದು ಜನರ ಜೀವಕ್ಕೆ ಮಾರಕವಾಗುತ್ತಿದೆ ಎಂದು ಹಲವು ಬಾರಿ ದೂರು ನೀಡಲಾಗಿದೆ. ಸಾಕಷ್ಟು ಬಾರಿ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆಯಾದರೂ  ಬಸ್ ಚಾಲಕರ ಈ ಹೆದ್ದಾರಿ ರೇಸ್ ಗಳು ಮಾತ್ರ ನಿಂತಿಲ್ಲ. ಚಾಲಕರ ಈ ನಿರ್ಲಕ್ಷ್ಯದಿಂದಾಗಿ ಕೇವಲ ಬಸ್ ನೊಳಗಿರುವ ಪ್ರಯಾಣಿಕರಿಗೆ ಮಾತ್ರವಲ್ಲ ಬಸ್ ಹೊರಗೆ ರಸ್ತೆಗಳಲ್ಲಿ ಸಂಚರಿಸುವ ಇತರೆ ವಾಹನಗಳು ಹಾಗೂ  ಪಾದಾಚಾರಿಗಳ ಜೀವಕ್ಕೂ ಈ ಚಾಲಕರು ಕುತ್ತು ತರುತ್ತಿದ್ದಾರೆ.

ಸರ್ಕಾರಿ ಅಂಕಿಅಂಶಗಳ ಪ್ರಕಾರವೇ 2015ರ ಒಂದೇ ವರ್ಷದಲ್ಲಿ ರಸ್ತೆ ಅಪಘಾತಗಳಲ್ಲಿ ಬರೊಬ್ಬರಿ 15,642 ಮಂದಿ ಸಾವನ್ನಪ್ಪಿದ್ದಾರೆ.

ಬಸ್ ಚಾಲಕರ ವಿರುದ್ಧ ಕ್ರಮ: ಪೊಲೀಸ್
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಇತ್ತ ಎಚ್ಚೆತ್ತುಕೊಂಡಿರುವ ತಮಿಳುನಾಡು ಪೊಲೀಸರು ಪ್ರಸ್ತುತ ಆರೋಪಿತ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com