ಒಡಿಶಾ: ಆಸ್ಪತ್ರೆ ಬಿಲ್ ಕಟ್ಟುವ ಸಲುವಾಗಿ ನವಜಾತ ಶಿಶು ಮಾರಾಟ ಮಾಡಿದ ಪೋಷಕರು

ಆಸ್ಪತ್ರೆಯ ವೆಚ್ಚ ಕಟ್ಟಲು ಹಣವಿಲ್ಲದ ಕಾರಣಕ್ಕೆ ಪೋಷಕರು ತಮ್ಮ ನವಜಾತ ಶಿಶುವೊಂದನ್ನು ಮಾರಾಟ ಮಾಡಿರುವ ಘಟನೆಯೊಂದು ಒಡಿಶಾದಲ್ಲಿ ನಡೆದಿದೆ...
ನವಜಾತ ಶಿಶುವನ್ನು ಮಾರಾಟ ಮಾಡಿದ ದಂಪತಿಗಳು
ನವಜಾತ ಶಿಶುವನ್ನು ಮಾರಾಟ ಮಾಡಿದ ದಂಪತಿಗಳು
ಕೆಂದ್ರಾಪರ: ಆಸ್ಪತ್ರೆಯ ವೆಚ್ಚ ಕಟ್ಟಲು ಹಣವಿಲ್ಲದ ಕಾರಣಕ್ಕೆ ಪೋಷಕರು ತಮ್ಮ ನವಜಾತ ಶಿಶುವೊಂದನ್ನು ಮಾರಾಟ ಮಾಡಿರುವ ಘಟನೆಯೊಂದು ಒಡಿಶಾದಲ್ಲಿ ನಡೆದಿದೆ. 
ನಿರಾಕರ್ ಮೊಹರಾನ (34), ಗೀತಾರಾಣಿ ಮೊಹರಾನ (30) ನವಜಾತ ಶಿಶುವನ್ನು ಮಾರಾಟ ಮಾಡಿದ ದಂಪತಿಗಳಾಗಿದ್ದಾರೆ. ಗೀತಾರಾಣಿ ಸೋಮವಾರ ಮೂರನೇ ಮಗುವಿಗೆ ಜನ್ಮ ನೀಡಿದ್ದರು. 
ಹೆರಿಗೆ ನೋವು ಕಾಣಿಕೊಂಡ ಕಾರಣ ಸೋಮವಾರ ಗೀತಾರಾಣಿಯವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆ ಮಾಡಲು ಸಮಸ್ಯೆಗಳಿರುವುದರಿಂದ ಕೆಂದ್ರಾಪರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಬಳಿಕ ನಿರಾಕರ್ ಅವರು ಪತ್ನಿಯನ್ನು ಖಾಸಗಿ ನರ್ಸಿಂಗ್ ಹೋಂನಲ್ಲಿ ದಾಖಲು ಮಾಡಿಸಿ ಹೆರಿಗೆ ಮಾಡಿದ್ದಾರೆ. 
ಆಸ್ಪತ್ರೆಯ ಒಟ್ಟಾರೆ ವೆಚ್ಚ ರೂ.7,5000 ಆಗಿದೆ. ಆದರೆ, ದಂಪತಿಗಳು ಕಡು ಬಡತನದಲ್ಲಿರುವುದರಿಂದಾಗಿ ಆಸ್ಪತ್ರೆಯ ವೆಚ್ಚ ಭರಿಸಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಈ ವೇಳೆ ಮಗುವನ್ನು ರೂ.12 ಸಾವಿರಕ್ಕೆ ಮಾರಾಟ ಮಾಡಿ ಆಸ್ಪತ್ರೆಯ ವೆಚ್ಚ ಭರಿಸಲು ಒಪ್ಪಿದ್ದಾರೆ. 
ಮಗುವನ್ನು ಮಾರಾಟ ಮಾಡಿದ ಬಳಿಕ ಗ್ರಾಮಕ್ಕೆ ಬಂದ ದಂಪತಿಗಳು ವಿಚಾರವನ್ನು ಗ್ರಾಮದ ಹಿರಿಯರಿಗೆ ತಿಳಿಸಿದ್ದಾರೆ. ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿದ್ದಾರೆ. ನಂತರ ಪೋಷಕರು ನರ್ಸಿಂಗ್ ಹೋಂ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ.  
ಇನ್ನು ಆಸ್ಪತ್ರೆಯ ವೈದ್ಯರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ದಂಪತಿಗಳಿಬ್ಬರಿಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂರನೇ ಮಗು ಕೂಡ ಹೆಣ್ಣುಮಗುವಾಗಿತ್ತು. ಹೀಗಾಗಿ ಮಗುವನ್ನು ತೆಗೆಸಲು ದಂಪತಿಗಳು ನಿರ್ಧರಿಸಿದ್ದರು. ಇದಕ್ಕೆ ನಾವು ವಿರೋಧಿಸಿದ್ದೆವು.ನಂತರ ಮಕ್ಕಳಿಲ್ಲದ ದಂಪತಿಗಳು ಈ ಮಗುವನ್ನು ನೋಡಿ ಮಗುವನ್ನು ಕೊಂಡುಕೊಳ್ಳುವುದಾಗಿ ಹೇಳಿದ್ದರು ಎಂದು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com