ದೇಶ

ಸಂವಿಧಾನವನ್ನು ಎತ್ತಿ ಹಿಡಿಯುತ್ತೇನೆ, ಮೇಲ್ಮನೆಯ ಗೌರವ ಹೆಚ್ಚಿಸುತ್ತೇನೆ; ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಸಂವಿಧಾನವನ್ನು ಎತ್ತಿ ಹಿಡಿಯುತ್ತೇನೆ, ಮೇಲ್ಮನೆಯ ಗೌರವ ಹೆಚ್ಚಿಸುತ್ತೇನೆ; ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
Published On :

ನವದೆಹಲಿ: ಉಪರಾಷ್ಟ್ರಪತಿಯಾಗಿ ನನ್ನ ನೇಮಕ ಭಾರತೀಯ ಸಂಸತ್ತಿನ ಪ್ರಜಾಪ್ರಭುತ್ವವನ್ನು ಎತ್ತಿ ತೋರಿಸುತ್ತದೆ, ಉಪರಾಷ್ಟ್ರಪತಿಯಾಗಿ ಸಂವಿಧಾದನವನ್ನು ಎತ್ತಿ ಹಿಡಿಯುತ್ತೇನೆ, ರಾಜ್ಯಸಭೆಯ ಗೌರವನ್ನು ಹೆಚ್ಚಿಸುತ್ತೇನೆಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಶನಿವಾರ ಹೇಳಿದ್ದಾರೆ. 

ಚುನಾಯಿತರಾದ ಬಳಿಕ ಮಾತನಾಡಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಕೃಷಿ ಕುಟುಂಬದ ಮೂಲದವನಾದ ನಾನು ಎಂದಿಗೂ ಈ ಮಟ್ಟಕ್ಕೆ ಏರುತ್ತೇನೆಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ. 

ಭಾರತದ ಉಪರಾಷ್ಟ್ರಪತಿಯಾಗಿ ನನ್ನನ್ನು ಆಯ್ಕೆ ಮಾಡಿ ನನಗೆ ನೀಡಿರುವ ಗೌರವದಿಂದಾಗಿ ನಾನು ವಿನೀತನಾಗಿದ್ದೇನೆ. ರಾಜ್ಯಸಭೆ ಸಭಾಪತಿಯಾಗಿಯೂ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ವಿವಿಧ ಪಕ್ಷಗಳ ಸಂಸತ್ತಿನ ಸದಸ್ಯರು ನನಗೆ ಬೆಂಬಲವನ್ನು ನೀಡುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ನನ್ನನ್ನು ಬೆಂಬಲಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಎಲ್ಲಾ ಪಕ್ಷದ ನಾಯಕರಿಗೆ ಕೃತಜ್ಞತೆಗಳು. ಉಪ ರಾಷ್ಟ್ರಪತಿಯಾಗಿ ನನ್ನ ಆಯ್ಕೆ ಭಾರತೀಯ ಸಂಸತ್ತಿನ ಪ್ರಜಾಪ್ರಭುತ್ವದ ಸೌಂದರ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಹೇಳಿದ್ದಾರೆ. 

ರಾಜ್ಯಸಭೆಯ ಸಭಾಪತಿಯಾಗಿ ಸಂವಿಧಾನವನ್ನು ಮತ್ತು ನನ್ನ ಗೌರವಪೂರ್ವಕ ಪೂರ್ವಜನರು ಸ್ಥಾಪಿಸಿದ ಉನ್ನತ ಗುಣಮಟ್ಟವನ್ನು ಎತ್ತಿಹಿಡಿಯುತ್ತೇನೆ. ಉಪರಾಷ್ಟ್ರಪತಿ ಕಚೇರಿಯನ್ನು ಸದುಪಯೋಗಪಡಿಸಿಕೊಂಡು ರಾಷ್ಟ್ರಪತಿಗಳ ಕಾರ್ಯಗಳಲ್ಲಿ ನೆರವಾಗುತ್ತೇನೆ ಮತ್ತು ಮೇಲ್ಮನೆಯ ಗೌರವವನ್ನು ಹೆಚ್ಚುಸುತ್ತೇನೆಂದು ತಿಳಿಸಿದ್ದಾರೆ. 

ಕೃಷಿ ಕುಟುಂಬದ ಮೂಲದವನಾದ ಒಬ್ಬ ಸಾಮಾನ್ಯ ವ್ಯಕ್ತಿಯಾಗಿರುವ ನನಗೆ ಇಂತಹ ಸ್ಥಆನ ನೀಡಿರವುದು ಭಾರತ ಪ್ರಜಾಪ್ರಭುತ್ವದ ಪ್ರಯಾಣದ ಮೈಲಿಗಲ್ಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಹಾಗೂ ಎನ್ ಡಿಎ ಪಕ್ಷದ ಎಲ್ಲಾ ನಾಯಕರಿಗೂ ಈ ಮೂಲಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.