ಅಮೇಥಿ: 'ಕೈ' ನಾಯಕರ ಕಣ್ಣು ಕೆಂಪಾಗಿಸಿದೆ ರಾಹುಲ್ ಗಾಂಧಿ ಮಿಸ್ಸಿಂಗ್ ಪೋಸ್ಟರ್

ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ನಾಪತ್ತೆಯಾಗಿದ್ದಾರೆ ಎಂಬ ಕುಹಕದ ಪೋಸ್ಟರ್ ಗಳು ರಾಹುಲ್‌ ಅವರ ಲೋಕಸಭಾ ಕ್ಷೇತ್ರವಾದ ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on: 
ಅಮೇಥಿ: ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ನಾಪತ್ತೆಯಾಗಿದ್ದಾರೆ ಎಂಬ ಕುಹಕದ ಪೋಸ್ಟರ್ ಗಳು ರಾಹುಲ್‌ ಅವರ ಲೋಕಸಭಾ ಕ್ಷೇತ್ರವಾದ ಅಮೇಥಿ ರಸ್ತೆಗಳಲ್ಲಿ ರಾರಾಜಿಸುತ್ತಿದ್ದು ಕಾಂಗ್ರೆಸ್ ನಾಯಕರ ಕಣ್ಣು ಕೆಂಪಗಾಗಿಸಿದೆ. 
ಅಮೇಥಿಯ ಸಂಸದರು ನಾಪತ್ತೆಯಾಗಿದ್ದು, ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂಬ ಕ್ಯಾಪ್ಷನ್ ನೀಡಲಾಗಿದೆ. ಪೋಸ್ಟರ್ ಅನ್ನು ಯಾವುದೇ ಸಂಸ್ಥೆ ಅಥವಾ ವ್ಯಕ್ತಿ ಹಾಕಿರುವ ಬಗ್ಗೆ ಮಾಹಿತಿಯಿಲ್ಲ. 
ರಾಹುಲ್‌ ಗಾಂಧಿ ಅವರು ತಮ್ಮ ಅಮೇಥಿ ಕ್ಷೇತ್ರಕ್ಕೆ ಕೊನೇ ಬಾರಿ ಭೇಟಿ ನೀಡಿದ್ದು ಈ ವರ್ಷ ಫೆಬ್ರವರಿಯಲ್ಲಿ - ರಾಜ್ಯ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದ ವೇಳೆಯಲ್ಲಿ. ಅಂದರೆ ಕ್ಷೇತ್ರಕ್ಕೆ ಭೇಟಿ ನೀಡಿ ಆರು ತಿಂಗಳು ಕಳೆದಿದ್ದು ಮತದಾರರು ಆಕ್ರೋಶಗೊಂಡಿದ್ದಾರೆ. 
ಜೊತೆಗೆ ಪೋಸ್ಟರ್ ನಲ್ಲಿ ಕಾಂಗ್ರೆಸ್ ನಾಯಕರನ್ನು ನಿಂದಿಸಲಾಗಿದೆ, ಕಾಂಗ್ರೆಸ್ ನಾಯಕರು ಯಾವುದೇ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗವಹಿಸುತ್ತಿಲ್ಲ ಎಂದು ಆರೋಪಿಸಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳ ಅನುದಾನಗ ಹಣವನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ ಎಂದು ದೂರಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com