ಅರುಣಾಚಲ ಪ್ರದೇಶದುದ್ದಕ್ಕೂ ಭಾರತ-ಚೀನಾ ಗಡಿ ಭಾಗ ಒತ್ತಡ ಮುಕ್ತವಾಗಿದೆ: ಸಿಎಂ ಪ್ರೇಮ ಖಂಡು

ಅರುಣಾಚಲ ಪ್ರದೇಶದುದ್ದಕ್ಕೂ ಭಾರತ-ಚೀನಾ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಪ್ರಸ್ತುತ ಉದ್ವಿಗ್ನ ವಾತಾವರಣದಿಂದ....
ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪ್ರೇಮ ಖಂಡು
ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪ್ರೇಮ ಖಂಡು
ಅಗರ್ತಲಾ(ತ್ರಿಪುರ): ಅರುಣಾಚಲ ಪ್ರದೇಶದುದ್ದಕ್ಕೂ ಭಾರತ-ಚೀನಾ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಪ್ರಸ್ತುತ ಉದ್ವಿಗ್ನ ವಾತಾವರಣದಿಂದ ಒತ್ತಡ ಮುಕ್ತವಾಗಿದ್ದು, ಎರಡೂ ದೇಶಗಳ ಮಧ್ಯೆ ಯುದ್ಧ ನಡೆಯುವ ಸಾಧ್ಯತೆಯಿಲ್ಲ ಎಂದು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಹೇಳಿದ್ದಾರೆ.
ಗಡಿಭಾಗದಲ್ಲಿ ಈಗ ಉದ್ವಿಗ್ನ ವಾತಾವರಣವಿಲ್ಲ. ಹೀಗಿರುವಾಗ ಭಾರತ ಮತ್ತು ಚೀನಾ ಮಧ್ಯೆ ಯುದ್ಧ ನಡೆಯುವ ಪ್ರಶ್ನೆ ಉದ್ಭವಿಸುವುದಿಲ್ಲ.ಯುದ್ಧ ನಡೆದರೆ ಎರಡೂ ದೇಶಗಳಿಗೆ ನಷ್ಟವಿದ್ದು ಎರಡೂ ದೇಶಗಳು ಪ್ರಬುದ್ಧವಾಗಿವೆ ಎಂದು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪ್ರೇಮ್ ಖಂಡು ಹೇಳಿದ್ದಾರೆ.
ಚೀನಾ ಜೊತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾತುಕತೆ ಮುಂದುವರಿಸಿದ್ದು ಸದ್ಯದಲ್ಲಿಯೇ ಗಡಿ ಸಮಸ್ಯೆ ಬಗೆಹರಿಯುವ ಲಕ್ಷಣವಿದೆ ಎಂದರು.
ಇಡೀ ಅರುಣಾಚಲ ಪ್ರದೇಶ ತನ್ನದೆಂದು ಚೀನಾ ಹೇಳುತ್ತಿದೆ. ಆದರೆ ಅದು ಅವರು ಹೇಳುವ ಮಾತಷ್ಟೆ, ಈ ವಿವಾದವನ್ನು ರಾಜತಾಂತ್ರಿಕ ಮಟ್ಟದಲ್ಲಿ ಬಗೆಹರಿಸಬೇಕಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾತುಕತೆ ಮುಂದುವರಿಸಿದ್ದು ಸಮಸ್ಯೆಯನ್ನು ಸದ್ಯದಲ್ಲಿಯೇ ಬಗೆಹರಿಸಲಿದೆ ಎಂದರು.
ಅರುಣಾಚಲ ಪ್ರದೇಶ ಗಡಿಯುದ್ದಕ್ಕೂ ಚೀನಾದ ಅಭಿವೃದ್ಧಿಗೆ ಹೋಲಿಸಿದರೆ ಭಾರತದ ಅಭಿವೃದ್ಧಿ ಮತ್ತು ಇಚ್ಛಾಶಕ್ತಿ ಕಡಿಮೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com