ಡೋಕ್ಲಾಮ್ ವಿವಾದ: ಎಂತಹುದ್ದೇ ಪರಿಸ್ಥಿತಿ ಎದುರಿಸಲು ಭಾರತ ಸಿದ್ಧ- ರಕ್ಷಣಾ ಸಚಿವ ಜೇಟ್ಲಿ ಭರವಸೆ

ಸಿಕ್ಕಿಂ ಸಮೀಪದ ವಿವಾದಿತ ಪ್ರದೇಶ ಡೋಕ್ಲಾಮ್ ಕುರಿತು ಕಳೆದೆರಡು ತಿಂಗಳಿನಿಂದ ಬಿಕ್ಕಟ್ಟು ನಿರ್ಮಾಣವಾಗಿರುವಾಗಲೇ, ಎಂತಹುದ್ದೇ ಸನ್ನಿವೇಶವನ್ನೇ ಆದರೂ ಎದುರಿಸಲು ಭಾರತ ಸನ್ನದ್ಧವಾಗಿದೆ ಎಂದು ರಕ್ಷಣಾ ಸಚಿವ...
ರಕ್ಷಣಾ ಸಚಿವ ಅರುಣ್ ಜೇಟ್ಲಿ
ರಕ್ಷಣಾ ಸಚಿವ ಅರುಣ್ ಜೇಟ್ಲಿ
ನವದೆಹಲಿ: ಸಿಕ್ಕಿಂ ಸಮೀಪದ ವಿವಾದಿತ ಪ್ರದೇಶ ಡೋಕ್ಲಾಮ್ ಕುರಿತು ಕಳೆದೆರಡು ತಿಂಗಳಿನಿಂದ ಬಿಕ್ಕಟ್ಟು ನಿರ್ಮಾಣವಾಗಿರುವಾಗಲೇ, ಎಂತಹುದ್ದೇ ಸನ್ನಿವೇಶವನ್ನೇ ಆದರೂ ಎದುರಿಸಲು ಭಾರತ ಸನ್ನದ್ಧವಾಗಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿಯವರು ಶುಕ್ರವಾರ ಭರವಸೆ ನೀಡಿದ್ದಾರೆ. 
ಡೋಕ್ಲಾಮ್ ವಿವಾದ ಕುರಿತಂತೆ ಲೋಕಸಭೆಯಲ್ಲಿ ಮಾತನಾಡಿರುವ ಅವರು, ಟಿಬೆಟ್ ನಲ್ಲಿ ಚೀನಿ ಯೋಧರ ಓಡಾಟ ಹೆಚ್ಚಳ ಹಾಗೂ ಭಾರತದ್ದಕ್ಕಿಂತ ಚೀನಾದ ರಕ್ಷಣಾ ಸಾಮರ್ಥ್ಯ ಚೆನ್ನಾಗಿದೆ ಎಂಬ ಹಿರಿಯ ಸೇನಾಧಿಕಾರಿಯೊಬ್ಬರ ಹೇಳಿಕೆ ಕುರಿತು ಸಂಸದರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 
ಯಾವುದೇ ಪರಿಸ್ಥಿತಿ ಎದುರಿಸಲು ಸೇನಾಪಡೆ ಸಿದ್ಧವಾಗಿದ್ದು, ತುರ್ತು ಪರಿಸ್ಥಿತಿ ಎದುರಿಸಲು ಬೇಕಾದ ಸೂಕ್ತ ಪರಿಕರಗಳು ಭಾರತೀಯ ಸಶಸ್ತ್ರ ಪಡೆಗಳ ಬಳಿ ಇವೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com