ವಿಪಕ್ಷಗಳಿಗೆ ದೊಡ್ಡ ಹಿನ್ನಡೆ: ಮಹತ್ವದ ಸಭೆಗೆ ಎನ್ ಸಿಪಿ ಗೈರು!

ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಅಹ್ಮದ್ ಪಟೆಲ್ ಅವರ ಗೆಲುವಿನೊಂದಿಗೆ, ಮಾನಸಿಕ ಸ್ಥೈರ್ಯ ಹೆಚ್ಚಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಈಗ ಹಿನ್ನಡೆಯುಂಟಾಗಿದ್ದು, ಎನ್ ಸಿಪಿ ಪಕ್ಷ ವಿರೋಧಪಕ್ಷಗಳ ಮಹತ್ವದ
ಎನ್ ಸಿಪಿ,
ಎನ್ ಸಿಪಿ,
Updated on: 
ನವದೆಹಲಿ: ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಅಹ್ಮದ್ ಪಟೆಲ್ ಅವರ ಗೆಲುವಿನೊಂದಿಗೆ, ಮಾನಸಿಕ ಸ್ಥೈರ್ಯ ಹೆಚ್ಚಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಈಗ ಹಿನ್ನಡೆಯುಂಟಾಗಿದ್ದು, ಎನ್ ಸಿಪಿ ಪಕ್ಷ ವಿರೋಧಪಕ್ಷಗಳ ಮಹತ್ವದ ಸಭೆಗೆ ಗೈರು ಹಾಜರಾಗಿದೆ. 
ಬಿಜೆಪಿ ವಿರುದ್ಧ ಕಾರ್ಯತಂತ್ರ ರೂಪಿಸಲು ವಿರೋಧಪಕ್ಷಗಳು ಕರೆದಿದ್ದ ಸಭೆಯಿಂದ ಎನ್ ಸಿಪಿ ದೂರ ಉಳಿದಿದ್ದು, ಕಾಂಗ್ರೆಸ್ ಗೆ ಹಿನ್ನಡೆಯುಂಟಾಗಿದೆ. ಬಿಜೆಪಿ ವಿರುದ್ಧ ಕಾರ್ಯತಂತ್ರ ಹೆಣೆಯುವುದಕ್ಕೆ ಸೋನಿಯಾ ಗಾಂಧಿ ನೇತೃತ್ವ ವಹಿಸಬೇಕೆಂದು 16 ಪಕ್ಷಗಳ ನಾಯಕರು ಮನವಿ ಮಾಡಿದ್ದರು. ಆದರೆ ಎನ್ ಸಿಪಿ ಪಕ್ಷ ಕಾಂಗ್ರೆಸ್ ನೊಂದಿಗಿನ ಮೈತ್ರಿಯಿಂದ ದೂರ ಉಳಿಯಲು ಚಿಂತನೆ ನಡೆಸಿದ್ದು, ಕಾಂಗ್ರೆಸ್ ಗೆ ಹಿನ್ನಡೆಯುಂಟಾಗಿದೆ. 
ಗುಜರಾತ್ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಎನ್ ಸಿಪಿ ಪಕ್ಷದ ಶಾಸಕರು ಬಿಜೆಪಿ ಪರ ಮತಚಲಾಯಿಸಿದ್ದರು, ಇದರಿಂದಾಗಿ ಕಾಂಗ್ರೆಸ್-ಎನ್ ಸಿಪಿ ನಡುವಿನ ಸಂಬಂಧ ಹದಗೆಟ್ಟಿದ್ದು, ಈಗ ವಿರೋಧ ಪಕ್ಷಗಳ ಸಭೆಗೂ ಇದರ ಪರಿಣಾಮ ಉಂಟಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com