ಪಿಒಕೆ, ಗಿಲ್ಗಿಟ್-ಬಲೂಚಿಸ್ತಾನ ಪಾಕಿಸ್ತಾನದ ಭಾಗವಲ್ಲ: ಪಿಒಕೆ ರಾಜಕಾರಣಿ

ಪಿಒಕೆ ಮತ್ತು ಗಿಲ್ಗಿಟ್-ಬಲೂಚಿಸ್ತಾನ ಪಾಕಿಸ್ತಾನದ ಭಾಗವಲ್ಲ, ಈ ಕುರಿಂತೆ ಪಾಕಿಸ್ತಾನದ ರಾಜಕೀಯ ಪಕ್ಷಗಳು ಮಾಡುತ್ತಿರುವ ಡ್ರಾಮವನ್ನು ನಿಲ್ಲಿಸಬೇಕು ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪಿಒಕೆ ಮತ್ತು ಗಿಲ್ಗಿಟ್-ಬಲೂಚಿಸ್ತಾನ ಪಾಕಿಸ್ತಾನದ ಭಾಗವಲ್ಲ, ಈ ಕುರಿಂತೆ ಪಾಕಿಸ್ತಾನದ ರಾಜಕೀಯ ಪಕ್ಷಗಳು ಮಾಡುತ್ತಿರುವ ಡ್ರಾಮವನ್ನು ನಿಲ್ಲಿಸಬೇಕು ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾಜಕಾರಣಿಯೊಬ್ಬರು ಶನಿವಾರ ಹೇಳಿದ್ದಾರೆ. 
ಪಿಒಕೆಯಲ್ಲಿ ನಡೆಸಲಾಗುತ್ತಿರುವ ಹಿಂಸಾಚಾರ ಕುರಿತಂತೆ ಪಾಕಿಸ್ತಾನದ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾಜಕಾರಣಿ ಮಿಸ್ಫರ್ ಖಾನ್ ಅವರು, ಪಾಕಿಸ್ತಾನ ಆಕ್ರಮಿಕ ಕಾಶ್ಮೀರದಲ್ಲಿ ರಾಜಕೀಯ ಪಕ್ಷಗಳು ಪಿಒಕೆ ಮತ್ತು ಗಿಲ್ಗಿಟ್-ಬಲೂಚಿಸ್ತಾನದಲ್ಲಿ ಶೋಷಣೆ ಹಾಗೂ ಲೂಠಿ ಮಾಡುತ್ತಿವೆ. ಇದನ್ನು ಮೊದಲು ನಿಲ್ಲಿಸಬೇಕಿದೆ ಎಂದು ತಿಳಿಸಿದ್ದಾರೆ. 
ಇದರಂತೆ ರಾಜಕೀಯ ಹೋರಾಟಗಾರ ತೈಫೂರ್ ಅಕ್ಬರ್ ಅವರೂ ಕೂಡು ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಪಿಒಕೆಯಲ್ಲಿರುವ ಜನರನ್ನು ದೇಶದ್ರೋಹಿಗಳಂತೆ ನೋಡಲಾಗುತ್ತಿದೆ. ಜನರನ್ನು ಅಪಹಱರಣ ಮಾಡಿ ರಾಷ್ಟ್ರೀಯ ಯೋಜನಾ ಕ್ರಮ ಎಂಬ ಹೆಸರಿನಲ್ಲಿ ಅವರನ್ನು ಜೈಲಿಗಟ್ಟಲಾಗುತ್ತಿದೆ ಎಂದಿದ್ದಾರೆ. 
ಪಿಒಕೆಯಲ್ಲಿ ರಸ್ತೆಗಳಿಲ್ಲ, ಕಾರ್ಖಾನೆಗಳಿಲ್ಲ, ಧರ್ಮದ ಹೆಸರಿನಲ್ಲಿ ಪುಸ್ತಕಗಳನ್ನೂ ನಿಷೇಧ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com