ಸುನಂದ ಪುಷ್ಕರ್ ಸಾವಿಗೆ ಸಂಬಂಧಪಟ್ಟಂತೆ ತಮ್ಮ ವಿರುದ್ಧ ಮಾನನಷ್ಟಕಾರಿ ವರದಿಗಳನ್ನು ಪ್ರಕಟಿಸದಂತೆ ರಿಪಬ್ಲಿಕ್ ಚಾನಲ್ ಗೆ ನಿರ್ಬಂಧ ವಿಧಿಸಬೇಕೆಂದು ಶಶಿ ತರೂರ್ ದೆಹಲಿ ಕೋರ್ಟ್ ಮೊರೆ ಹೋಗಿದ್ದರು. ಜೊತೆಗೆ 2ಕೋಟಿ ರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಸಂಬಂಧ ದೆಲಿ ಹೈಕೋರ್ಟ್ ಅರ್ನಬ್ ಗೋಸ್ವಾಮಿ ಮತ್ತು ಚಾನೆಲ್ ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿತ್ತು.