ಒಡಿಶಾ: ಗಣೇಶ ಚತುರ್ಥಿ ಹಿನ್ನಲೆ ನೀಡಲಾಗಿದ್ದ ಪ್ರಸಾದ ತಿಂದು 70 ಜನ ಅಸ್ವಸ್ತ

ಗಣೇಶ ಚತುರ್ಥಿ ಹಬ್ಬದ ದಿನದಂದೂ ಒಡಿಶಾದ ಬಲಸೊರ್ ಜಿಲ್ಲೆಯಲ್ಲಿ ನೀಡಲಾಗಿದ್ದ ಪ್ರಸಾದವನ್ನು ತಿಂದು 70ಕ್ಕೂ ಹೆಚ್ಚು ಮಂದಿ ಅಸ್ವಸ್ತಗೊಂಡಿರುವ ಘಟನೆ ಭಾನುವಾರ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬಲಸೊರ್; ಗಣೇಶ ಚತುರ್ಥಿ ಹಬ್ಬದ ದಿನದಂದೂ ಒಡಿಶಾದ ಬಲಸೊರ್ ಜಿಲ್ಲೆಯಲ್ಲಿ ನೀಡಲಾಗಿದ್ದ ಪ್ರಸಾದವನ್ನು ತಿಂದು 70ಕ್ಕೂ ಹೆಚ್ಚು ಮಂದಿ ಅಸ್ವಸ್ತಗೊಂಡಿರುವ ಘಟನೆ ಭಾನುವಾರ ನಡೆದಿದೆ. 
ಗಣೇಶ ಚತುರ್ಥಿ ಪ್ರಯುಕ್ತ ನುಗಾಯಾನ್ ನಲ್ಲಿರುವ ಶಾಲಾ ಆವರಣದಲ್ಲಿ ಪ್ರಸಾದವನ್ನು ನೀಡಲಾಗಿತ್ತು. ಪ್ರಸಾದ ತಿಂದ ಕೆಲವೇ ನಿಮಿಷಗಳಲ್ಲಿ ಜನರು ಹೊಟ್ಟೆನೋವು ಕಾಣಿಸಿಕೊಂಡಿದೆ. ಕೆಲವರು ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದಾರೆ, ಅಸ್ವಸ್ತಗೊಂಡ 70 ಮಂದಿಯಲ್ಲಿ ಬಹುತೇಕರು ವಿದ್ಯಾರ್ಥಿಗಳಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. 
ಅಸ್ವಸ್ತಗೊಂಡ ಜನರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಯಿತು ಎಂದು ತಿಳಿಸಿದ್ದಾರೆ. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಲಸೋರ್ ಜಿಲ್ಲೆಯ ಮುಖ್ಯ ವೈದ್ಯಕೀಯ ಅಧಿಕಾರಿ ವಿವೇಕಾನಂದ ದಾಸ್ ಅವರು, ಪ್ರಸಾದದಲ್ಲಿ ವಿಷಯುಕ್ತ ಅಂಶ ಇದ್ದಿದ್ದರಿಂದ ಘಟನೆ ಸಂಭವಿಸಿದೆ. ಈಗಾಗಲೇ ವೈದ್ಯಕೀಯ ತಂಡವನ್ನು ಸ್ಥಳಕ್ಕೆ ಕಳುಹಿಸಿಕೊಡಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. 
ಘಟನೆ ಕುರಿತಂತೆ ಈಗಾಗಲೇ ತನಿಖೆ ಆದೇಶಿಸಲಾಗಿದ್ದು, ಆಹಾರದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ವರದಿ ಬಂದ ಬಳಿಕ ಸೂಕ್ತ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com