ಡೊಕ್ಲಾಂ ವಿವಾದ: ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತ, ಚೀನಾ ಒಪ್ಪಿಗೆ

2 ತಿಂಗಳಿಗೂ ಅಧಿಕ ಕಾಲ ಭಾರತ ಮತ್ತು ಚೀನಾ ನಡುವಿನ ಶೀಥಲ ಸಮರಕ್ಕೆ ಕಾರಣವಾಗಿದ್ದ ಸಿಕ್ಕಿಂ ನ ಡೋಕ್ಲಾಂ ಗಡಿ ವಿವಾದಕ್ಕೆ ಸೋಮವಾರ ತಾರ್ಕಿಕ ಅಂತ್ಯ ಹಾಕಲಾಗಿದ್ದು, ಉಭಯ ಸೇನಾಪಡೆಗಳು ವಿವಾದಿತ ಪ್ರದೇಶದಿಂದ ಹಿಂದಕ್ಕೆ ಸರಿಯಲು ಒಪ್ಪಿಗೆ ಸೂಚಿಸಿವೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: 2 ತಿಂಗಳಿಗೂ ಅಧಿಕ ಕಾಲ ಭಾರತ ಮತ್ತು ಚೀನಾ ನಡುವಿನ ಶೀಥಲ ಸಮರಕ್ಕೆ ಕಾರಣವಾಗಿದ್ದ ಸಿಕ್ಕಿಂ ನ ಡೋಕ್ಲಾಂ ಗಡಿ ವಿವಾದಕ್ಕೆ ಸೋಮವಾರ ತಾರ್ಕಿಕ ಅಂತ್ಯ ಹಾಕಲಾಗಿದ್ದು, ಉಭಯ ಸೇನಾಪಡೆಗಳು ವಿವಾದಿತ  ಪ್ರದೇಶದಿಂದ ಹಿಂದಕ್ಕೆ ಸರಿಯಲು ಒಪ್ಪಿಗೆ ಸೂಚಿಸಿವೆ ಎಂದು ತಿಳಿದುಬಂದಿದೆ.

ಭಾರತ ಮತ್ತು ಚೀನಾ ರಾಯಭಾರ ಕಚೇರಿಗಳ ಮಟ್ಟದ ಸಂಧಾನ ಮಾತುಕತೆ ಕೊನೆಗೂ ಯಶಸ್ವಿಯಾಗಿದೆ. ಹೀಗಾಗಿ ವಿವಾದಿತ ಸಿಕ್ಕಿಂನ ಡೋಕ್ಲಾಂ ನಲ್ಲಿ ಬೀಡುಬಿಟ್ಟಿದ್ದ ಉಭಯ ದೇಶಗಳ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು  ಉಭಯ ದೇಶಗಳು ಒಪ್ಪಿಗೆ ನೀಡಿವೆ. ಈ ಬಗ್ಗೆ ಸ್ವತಃ ಭಾರತದ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಅವರು ಟ್ವೀಟ್ ಮಾಡಿದ್ದು, ಗಡಿಯಲ್ಲಿ ನಿರ್ಮಾಣವಾಗಿರುವ ಪ್ರಕ್ಷುಬ್ಧ ವಾತಾವರಣ ಶಮನಕ್ಕಾಗಿ ಈ ನಿರ್ಧಾರ  ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಆ ಮೂಲಕ ಸುಧೀರ್ಘ 2 ತಿಂಗಳಿಗೂ ಅಧಿಕ ಕಾಲ ನಡೆದ ಭಾರತ-ಚೀನೀ ಸೈನಿಕರ ಸಂಘರ್ಷಕ್ಕೆ ಉಭಯ ದೇಶಗಳ ಸರ್ಕಾರಗಳು ತಾರ್ಕಿಕ ಅಂತ್ಯ ನೀಡಿವೆ. ಈ ಹಿಂದೆ ಲಡಾಖ್ ನಲ್ಲಿ ಭಾರತೀಯ ಸೈನಿಕರ ಮೇಲೆ ಚೀನೀ  ಸೈನಿಕರು ಹಲ್ಲೆ ಮಾಡಿದ್ದಲ್ಲದೇ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಹಲವು ಸೈನಿಕರು ಗಾಯಗೊಂಡಿದ್ದರು. ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಈ ವಿಡಿಯೋ ಸಂಬಂಧ ವಿಶ್ವ ಸಮುದಾಯ ಸಮಸ್ಯೆ ಸಂಧಾನದ ಮೂಲಕ  ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದವು.

ಕೊನೆಗೂ ವಿಶ್ವ ಸಮುದಾಯದ ಒತ್ತಡಕ್ಕೆ ಮಣಿದಿರುವ ಚೀನಾ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ಸಮ್ಮತಿ ಸೂಚಿಸಿದೆ. ಅಂತೆಯೇ ಭಾರತ ಕೂಡ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ಮುಂದಾಗಿದೆ.

ವಿವಾದಕ್ಕೆ ಅಂತ್ಯಕ್ಕೆ ನೆರವಾದ ಬ್ರಿಕ್ಸ್ ಸಮಾವೇಶ
ಇನ್ನು ಮುಂಬರುವ ಸೆಪ್ಟೆಂಬರ್ ನಲ್ಲಿ ಚೀನಾದಲ್ಲಿ ಬ್ರಿಕ್ಸ್ ಸಮಾವೇಶ ನಡೆಯಲಿದ್ದು, ಈ ಮಹತ್ವದ ಸಮಾವೇಶಕ್ಕೆ ಡೋಕ್ಲಾಂ ವಿವಾದದ ಕರಿ ನೆರಳು ಅಡ್ಡಿಯಾಗಬಹುದು ಎಂಬ ಶಂಕೆ ಮೇರೆಗೆ ಅಧಿಕಾರಿಗಳು ಸಂಧಾನ  ನಡೆಸಿದ್ದರು. ಡೋಕ್ಲಾಂ ವಿವಾದ ಮುಂದುವರೆದಿದ್ದರೆ ಚೀನಾ ಬ್ರಿಕ್ಸ್ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗೈರಾಗುವ ಸಾಧ್ಯತೆ ಇತ್ತು. ಹೀಗಾಗಿ ಚೀನಾ ಅನಿವಾರ್ಯವಾಗಿ ಡೋಕ್ಲಾಂ ವಿವಾದಕ್ಕೆ ತೆರೆ ಎಳೆಯಲೇ  ಬೇಕಿತ್ತು. ಅದರಂತೆ ಇದೀಗ ಸಂಧಾನ ಯಶಸ್ವಿಯಾಗಿದ್ದು, ಡೋಕ್ಲಾ ವಿವಾದ ಅಂತ್ಯವಾಗಿದೆ. ಬ್ರಿಕ್ಸ್ ಸಮಾವೇಶದ ಮೇಲಿದ್ದ ಕರಿನೆರಳು ಕೂಡ ಸರಿದಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com