12 ರಾಜ್ಯಗಳಲ್ಲಿ ಭಾರೀ ಮಳೆ ಬೀಳುವ ಮುನ್ಸೂಚನೆ; ಪ್ರವಾಹದ ಭೀತಿ

ಅಸ್ಸಾಂ, ಬಿಹಾರ ಸೇರಿದಂತೆ ಆರು ರಾಜ್ಯಗಳಲ್ಲಿ ಈಗಾಗಲೇ ಅವ್ಯಾಹತವಾಗಿ ಮಳೆ ಸುರಿದು ನೆರೆ ಪ್ರವಾಹ ಉಂಟಾಗಿದ್ದು...
ನಿನ್ನೆ ಮುಂಬೈಯಲ್ಲಿ ಸುರಿದ ಧಾರಾಕಾರ ಮಳೆಗೆ ರಸ್ತೆಯಲ್ಲಿ ನೀರು ಪ್ರವಾಹದಂತೆ ಹರಿಯುತ್ತಿರುವುದು.
ನಿನ್ನೆ ಮುಂಬೈಯಲ್ಲಿ ಸುರಿದ ಧಾರಾಕಾರ ಮಳೆಗೆ ರಸ್ತೆಯಲ್ಲಿ ನೀರು ಪ್ರವಾಹದಂತೆ ಹರಿಯುತ್ತಿರುವುದು.
Updated on: 

ನವದೆಹಲಿ: ಅಸ್ಸಾಂ, ಬಿಹಾರ ಸೇರಿದಂತೆ ಆರು ರಾಜ್ಯಗಳಲ್ಲಿ ಈಗಾಗಲೇ ಅವ್ಯಾಹತವಾಗಿ ಮಳೆ ಸುರಿದು ನೆರೆ ಪ್ರವಾಹ ಉಂಟಾಗಿದ್ದು, ಕೇಂದ್ರ ಸರ್ಕಾರ ಇನ್ನೂ 12 ರಾಜ್ಯಗಳಲ್ಲಿ ಮುಂದಿನ 3 ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ನೆಚ್ಚರಿಕೆ ನೀಡಿದೆ.

ಭಾರೀ ಮಳೆಯಿಂದಾಗಿ ದೇಶದ 14 ನದಿಗಳು ಸೇರಿದಂತೆ ಉಪ ನದಿಗಳಲ್ಲಿ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಹರಿಯುವ ಸಾಧ್ಯತೆಯಿದೆ.

ನಿನ್ನೆ ಮುಂಬೈಯ ಸಾಂತಕ್ರೂಝ್ ನಲ್ಲಿ 298 ಮಿಲಿ ಮೀಟರ್ ಮಳೆಯಾಗಿದ್ದು ನಗರದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಮಹಾರಾಷ್ಟ್ರದ ಉತ್ತರ ಮತ್ತು ಕೇಂದ್ರ ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಈ ವರ್ಷ ಭಾರೀ ಮಳೆ, ನೆರೆ ಪ್ರವಾಹದಿಂದಾಗಿ ರಾಜಸ್ತಾನ, ಗುಜರಾತ್ ಮತ್ತು ಮಧ್ಯ ಪ್ರದೇಶಗಳಲ್ಲಿ ನದಿಗಳಿಂದ ನೀರು ಭಾರೀ ಪ್ರಮಾಣದಲ್ಲಿ ಹರಿದು ಬರುತ್ತಿರುವುದರಿಂದ ಜಲಾಶಯಗಳು ಮತ್ತು ಅಣೆಕಟ್ಟುಗಳು ತುಂಬಿ ಹರಿಯುತ್ತಿವೆ. ಮಾಹಿ, ಸಾಬರ್ಮತಿ, ಬನಾಸ್ ಮತ್ತು ಅದರ ಉಪ ನದಿಗಳ ಸಾಮರ್ಥ್ಯ ಮಟ್ಟದಲ್ಲಿ ಶೇಕಡಾ 90ರಿಂದ 94ರಷ್ಟು ನೀರನ್ನು ಸಂಗ್ರಹಿಸಿವೆ.

ಈ ಮಧ್ಯೆ ಮಹಾರಾಷ್ಟ್ರ, ಕರ್ನಾಟಕ, ಮಧ್ಯ ಪ್ರದೇಶ, ಗುಜರಾತ್ ರಾಜ್ಯಗಳ ವಿವಿಧ ಭಾಗಗಳಲ್ಲಿ 4 ಸೆಂಟಿ ಮೀಟರ್ ನಿಂದ 19 ಸೆಂಟಿ ಮೀಟರ್ ವರೆಗೆ ಭಾರೀ ಮಳೆಯಾಗಿದೆ. ಮಧ್ಯ ಪ್ರದೇಶ, ಗುಜರಾತ್, ಗೋವಾ, ಕರ್ನಾಟಕ, ರಾಜಸ್ತಾನ, ಛತ್ತೀಸ್ ಗಢ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳು ನಾಡು, ಕೇರಳ ಮತ್ತು ಡಮನ್ ಮತ್ತು ಡಿಯೊಗಳಲ್ಲಿ ಮುಂದಿನ ಮೂರು ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮತ್ತು ಕೇಂದ್ರ ಜಲ ಸಂಪನ್ಮೂಲ ಇಲಾಖೆ ಮುನ್ಸೂಚನೆ ನೀಡಿದೆ.

ಭಾರೀ ಮಳೆಯಿಂದಾಗಿ ಮಾಹಿ, ಸಾಬರ್ಮತಿ, ಬನಾಸ್, ಗೋದಾವರಿ ಮತ್ತು ಅವುಗಳ ಉಪ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಲಿದೆ. ಮುಂಬೈ ಸುತ್ತಮುತ್ತ ಕೂಡ ಮುಂದಿನ 24 ಗಂಟೆಗಳಲ್ಲಿ ಇನ್ನಷ್ಟು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com