ಗಾಂಧಿನಗರ: ಗುಜರಾತ್ ವಿಧಾನಸಭೆಗೆ ಕಳೆದ ಡಿಸೆಂಬರ್ 9ರಂದು ನಡೆದ ಮೊದಲ ಹಂತದ ಚುನಾವಣೆ ವೇಳೆ ಆರು ಮತಗಟ್ಟೆಗಳಲ್ಲಿ ಅಧಿಕಾರಿಗಳು ಇವಿಎಂಗಳಲ್ಲಿ ಅಸ್ತಿತ್ವದಲ್ಲಿರುವ ಡೇಟಾವನ್ನು ಅಳಿಸಲು ಮರೆತ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಆ ಆರು ಮತಗಟ್ಟೆಗಳಲ್ಲಿ ಡಿಸೆಂಬರ್ 14ರಂದು ಮರು ಮತದಾನಕ್ಕೆ ಮಂಗಳವಾರ ಆದೇಶಿಸಿದೆ.