ಅಪಘಾತ-ತಡೆಗಟ್ಟುವಿಕೆ ವ್ಯವಸ್ಥೆ ನವೀಕರಣಕ್ಕೆ ರೇಲ್ವೆ 12,000 ಕೋಟಿ ರೂ. ಬಿಡುಗಡೆಗೆ ಅನುಮೋದನೆ

ಅಪಘಾತ-ತಡೆಗಟ್ಟುವಿಕೆ ವ್ಯವಸ್ಥೆ ನವೀಕರಣಕ್ಕೆ ಭಾರತೀಯ ರೇಲ್ವೆ 12 ಸಾವಿರ ಕೋಟಿ ರುಪಾಯಿ ಬಿಡುಗಡೆಗೆ ಅನುಮೋದನೆ ನೀಡಿದೆ...
ರೈಲು
ರೈಲು
Updated on: 
ನವದೆಹಲಿ: ಅಪಘಾತ-ತಡೆಗಟ್ಟುವಿಕೆ ವ್ಯವಸ್ಥೆ ನವೀಕರಣಕ್ಕೆ ಭಾರತೀಯ ರೇಲ್ವೆ 12 ಸಾವಿರ ಕೋಟಿ ರುಪಾಯಿ ಬಿಡುಗಡೆಗೆ ಅನುಮೋದನೆ ನೀಡಿದೆ. 
ಯುರೋಪಿಯನ್ ರೈಲು ರಕ್ಷಣಾ ವ್ಯವಸ್ಥೆಯನ್ನು ಅಳವಡಿಸುವ ಯೋಜನೆಗೆ ರೇಲ್ವೆ ಇಲಾಖೆ ಮುಂದಾಗಿದ್ದು ಈ ಸಂಬಂಧ ಡಿಸೆಂಬರ್ 15ರಂದು ನಡೆದಿದ್ದ ರೇಲ್ವೆ ಮಂಡಳಿಯಲ್ಲಿ ಯುರೋಪಿಯನ್ ರೈಲು ನಿಯಂತ್ರಣ ವ್ಯವಸ್ಥೆಯೊಂದಿಗೆ 6,000 ವಿದ್ಯುತ್ ಸ್ಥಳಗಳನ್ನು ಸಜ್ಜುಗೊಳಿಸಲಾಗಿದ್ದು ಇದರಿಂದ ಅಪಘಾತಗಳನ್ನು ತಡೆಯಲು ಚಾಲಕರಿಗೆ ಅಥವಾ ಪೈಲಟ್ ಗಳಿಗೆ ಸಹಾಯಕವಾಗುತ್ತದೆ ಎಂದು ರೇಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 
ನಾಲ್ಕು ಮೆಟ್ರೋಗಳನ್ನು ಸಂಪರ್ಕಿಸುವ 9,054 ಕಿಮೀ ಉದ್ದದ ಗೋಲ್ಡನ್ ಕ್ವಾಡ್ರಿಲ್ಯಾಟರಲ್ ಮಾರ್ಗವನ್ನು ಅಪಘಾತ-ಮುಕ್ತ ಕಾರಿಡಾರ್ ಮಾಡಲು ಇಟಿಸಿಎ ಲೆವೆಲ್-2 ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಾಪಿಸಲು ನಿರ್ಧರಿಸಲಾಗಿದ್ದು ಈ ಯೋಜನೆಯ ವೆಚ್ಚ 12 ಸಾವಿರ ಕೋಟಿ ರುಪಾಯಿ ಅಂದಾಜು ವೆಚ್ಚವಾಗಲಿದೆ ಎಂದು ಹೇಳಿದ್ದಾರೆ. 
ಲೋಕೋಮೋಟಿವ್ ಪೈಲಟ್ಗಳು ಸಾಮಾನ್ಯವಾಗಿ ಒತ್ತಡದ ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಇದರಿಂದಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಸೀಮಿತ ವಿಸ್ತಾರದಲ್ಲಿ ಲೋಕೋ ಪೈಲಟ್ಗಳಿಗೆ ಬ್ಯಾಕ್-ಅಪ್ ಒದಗಿಸಲು ETCS ಲೆವೆಲ್-ಐ ನಿರ್ದಿಷ್ಟತೆಯ ಆಧಾರದ ಮೇಲೆ ಮೂಲಭೂತ ಸ್ವಯಂಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆಯನ್ನು ಅಳವಡಿಸುವ ಉದ್ದೇಶವನ್ನು ರೈಲ್ವೆ ಮಂಡಳಿ ಹೊಂದಿದೆ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com